ಮಡಿಕೇರಿ, ಫೆ. ೨೧: ಹೊಟೇಲ್ ಆವರಣದಲ್ಲಿದ್ದ ಜೇನು ಗೂಡಿಗೆ ಮದುವೆ ಕಾರ್ಯಕ್ರಮದ ನೆಪವೊಡ್ಡಿ ಕೀಟನಾಶಕ ಸಿಂಪಡಿಸಿ ಸಾವಿರಾರು ನೊಣಗಳ ಮಾರಣ ಹೋಮ ಮಾಡಲಾ ಗಿದ್ದು, ಈ ಕುರಿತು ಸಾರ್ವಜನಿಕ ವಲಯ ದಲ್ಲಿ ಹೊಟೇಲ್ ಮಾಲೀಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಹಸ್ರಾರು ತಳಿಗಳ ಹೂ-ಗಿಡಗಳ ಪರಾಗಸ್ಪರ್ಶಕ್ಕೆ ಅತ್ಯವಶ್ಯಕವಾಗಿರುವ ಜೇನು ನೊಣಗಳನ್ನು ಈ ರೀತಿ ವಿದ್ಯಾವಂತರೇ ಕೊಂದು ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಗೊಂಡಿದ್ದು ಜೇನು ನೊಣಗಳು ಸತ್ತು ಬಿದ್ದಿರುವ ಚಿತ್ರ ವೈರಲ್ ಆಗಿದೆ. ಕೀಟಗಳಿಂದ ತೊಂದರೆ ಆದಲ್ಲಿ ಬೆಂಕಿಯ ಹೊಗೆ ಹಾಯಿಸಿ ಅವುಗಳನ್ನು ತೆರವುಗೊಳಿಸಬಹುದಿತ್ತಲ್ಲವೇ? ಎಂದೂ ನೆಟ್ಟಿಗರು ಪ್ರಶ್ನಿಸಿದ್ದಾರೆ.