ಕಳೆದ ಕೆಲವು ದಿನಗಳಿಂದ ಸಂಜೆಯ ಆಕಾಶದಲ್ಲಿ ಶುಕ್ರ (ಗಿeಟಿus) ಹಾಗೂ ಗುರು (ಎuಠಿiಣeಡಿ) ಗ್ರಹಗಳು ಹೊಳೆಯುತ್ತಿದ್ದು ಇವುಗಳೊಂದಿಗೆ ಇಂದು ವಕ್ರರೇಖಾ ಆಕಾರದ (ಛಿಡಿesಛಿeಟಿಣ) ಚಂದ್ರನೂ ಸೇರಿಕೊಳ್ಳಲಿದ್ದು, ಅಂದ ಹೆಚ್ಚಿಸಲಿದೆ. ಸೌರ ಮಂಡಲದಲ್ಲೇ ಅತ್ಯಂತ ದೊಡ್ಡ ಗ್ರಹವಾಗಿರುವ ಗುರು ಗ್ರಹವು ಕಳೆದ ೩ ತಿಂಗಳುಗಳಿAದ ಪಶ್ಚಿಮ ದಿಕ್ಕಿನಲ್ಲಿ ಸೂರ್ಯಾಸ್ತದ ಬಳಿಕ ಕಾಣಿಸಿಕೊಳ್ಳುತ್ತಿದೆ. ಇದರ ಕೆಳಗೆ ಶುಕ್ರ ಗ್ರಹವು ಕೆಲ ದಿನಗಳಿಂದ ಕಂಗೊಳಿಸುತ್ತಿದೆ. ಗುರು, ಗಾತ್ರದಲ್ಲಿ ದೊಡ್ಡದಾಗಿದ್ದರೂ ಶುಕ್ರವು ಭೂಮಿಗೆ ಅತ್ಯಂತ ಸನಿಹವಿರುವುದರಿಂದ ಶುಕ್ರ ಗ್ರಹವೇ ಗಾತ್ರದಲ್ಲಿ ದೊಡ್ಡದಾಗಿ ಗೋಚರಿಸುತ್ತದೆ.
ಇವುಗಳ ಕೆಳಗೆ ಸಮೀಪದಲ್ಲೆ ವಕ್ರರೇಖಾ ಆಕಾರದ ಚಂದ್ರನೂ ತಾ. ೨೨ ರಂದು (ಇಂದು) ಗೋಚರಿಸಲಿದ್ದು, ಆಕರ್ಷಣೀಯವಾಗಿರಲಿದೆ. ತಾ.೨೦ ರಂದು ಅಮಾವಾಸ್ಯೆ ಆಗಿದ್ದು, ಅಮಾವಾಸ್ಯೆ ಕಳೆದು ಮಾರನೇ ದಿನವು (ತಾ.೨೧) ಚಂದ್ರನು ಸೂರ್ಯನೊಂದಿಗೆ ಉದಯಿಸಿ ಬಹುತೇಕ ಸೂರ್ಯನೊಂದಿಗೆ ಅಸ್ತವಾಗುವ ಕಾರಣ, ಗ್ರಹಗಳತ್ತ ಚಂದ್ರ ಆಗಮಿಸುವಾಗ ಸೂರ್ಯಾಸ್ತ ಆಗದೆ ಇರುವುದರಿಂದ ವೀಕ್ಷಣೆ ಕಷ್ಟಸಾಧ್ಯವಾಗಲಿದೆ.
ಆದರೆ ಅಮಾವಾಸ್ಯೆ ಕಳೆದು ಎರಡನೆಯ ದಿನ (ತಾ. ೨೨ ರಂದು) ಚಂದ್ರನು ಸೂರ್ಯೋದಯ ಕಳೆದು ಕೆಲ ನಿಮಿಷಗಳಾದ ಬಳಿಕ ಉದಯವಾಗಲಿದ್ದು, ಸೂರ್ಯಾಸ್ತದ ಬಳಿಕ ಕೆಲ ಹೊತ್ತು ಗ್ರಹಗಳ ಸಮೀಪವೇ ರೋಮಾಂಚನಕಾರಿ ‘ಕ್ರೆಸೆಂಟ್ ಮೂನ್’ ಆಗಿ ಪಶ್ಮಿಮ ದಿಕ್ಕಿನಲ್ಲಿ ಗೋಚರಿಸಲಿದೆ. ಚಂದ್ರನ ಮೇಲೆ ಶುಕ್ರ ಹಾಗೂ ಅದರ ಮೇಲೆ ಗುರು ಕೂಡ ಕಾಣಲಿದ್ದು ಆಕರ್ಷಣೀಯ ನೋಟವನ್ನು ಆಸಕ್ತರು ಕಣ್ತುಂಬಿಕೊಳ್ಳಬಹುದಾಗಿದೆ.