ಗೋಣಿಕೊಪ್ಪಲು, ಫೆ.೨೦ : ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಕೊಡಗಿನ ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಕೇವಲ ಭರವಸೆ ನೀಡುತ್ತಾ ಸಮಯ ಕಳೆದಿದೆ. ಹೀಗಾಗಿ ಬಿಜೆಪಿ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಸರ್ಕಾರವಾಗಿದೆ ಎಂದು ಆರೋಪಿಸಿ ನಗರದಲ್ಲಿ ಪೋಸ್ಟ್ರ್ ಅಂಟಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಅಧ್ಯಕ್ಷತೆಯಲ್ಲಿ ನಗರದ ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಹಲವೆಡೆ ‘ಸಾಕಪ್ಪ ಸಾಕು.! ಕಿವಿ ಮೇಲೆ ಹೂವ’ ಎಂಬ ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದರು.
ಈ ವೇಳೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಯುವ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್, ಒಬಿಸಿ ಅಧ್ಯಕ್ಷ ಶರತ್ ಕಾಂತ್, ನಗರ ಅಧ್ಯಕ್ಷ ಪ್ರಮೋದ್ ಗಣಪತಿ, ಮುಖಂಡರಾದ ಪಲ್ವೀನ್ ಪೂಣಚ್ಚ, ಕೊಕ್ಕಂಡ ರೋಷನ್, ಚಂಗುಲAಡ ಸೂರಜ್, ಮಣಿಕುಂಞ, ಪ್ರೀತಂ, ರಮೇಶ್, ಕೊಟ್ಟಂಗಡ ರಾಜ, ಚೆಪ್ಪುಡೀರ ಬೋಪಣ್ಣ ತೀತಿಮಾಡ ಸದಾ, ಸಾದಲಿ, ಬಸಂತ್ ಕುಮಾರ್ ಮತ್ತಿತರರು ಹಾಜರಿದ್ದರು.