ಬೆಂಗಳೂರು, ಫೆ. ೨೧: ಕಾಫಿ ಪ್ಲಾಂಟೇಷನ್ ಬೆಳೆಗಾರರಿಗೆ ರಾಜ್ಯ ಸರ್ಕಾರ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವ ಸಂದರ್ಭದಲ್ಲಿ ನಿಯಮಗಳನ್ನು ರೂಪಿಸುವ ಕುರಿತಂತೆ ವಿಧಾನ ಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ ಅಧ್ಯಕ್ಷತೆಯಲ್ಲಿ ಕಾಫಿ ಬೆಳೆಗಾರರ ಒಕ್ಕೂಟದ ಜತೆ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಕಾಫಿ ಪ್ಲಾಂಟರ್ಸ್ ಫೆಡರೇಶನ್ ಅಧ್ಯಕ್ಷ ಪ್ರಕಾಶ್ ಮತ್ತಿತರರು ಹಾಜರಿದ್ದರು.

ಗುತ್ತಿಗೆ ಶುಲ್ಕ ಒಂದು ವರ್ಷದ ಅವಧಿಗೆ ಒಂದರಿAದ ಹತ್ತು ಎಕರೆವರೆಗೆ, ಎರಡು ಸಾವಿರ ರೂಪಾಯಿ ಹತ್ತರಿಂದ ಇಪ್ಪತ್ತು ಎಕರೆವರೆಗೆ, ಎರಡು ಸಾವಿರದ ಐದುನೂರು ರೂಪಾಯಿ, ಇಪ್ಪತ್ತರಿಂದ ಇಪ್ಪತೈದು ಎಕರೆವರೆಗೆ ಮೂವತ್ತು ಸಾವಿರ ರೂಪಾಯಿ ಶುಲ್ಕ ವಿಧಿಸುವ ಬಗ್ಗೆ ಕಂದಾಯ ಸಚಿವರು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಸಾಮಾನ್ಯ ವರ್ಗದ ಬೆಳೆಗಾರರಿಗೆ ಶುಲ್ಕದ ಶೇ. ೫೦ ಭಾಗ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಒಪ್ಪಿಗೆ ನೀಡಲಾಗಿದೆ.

ಗುತ್ತಿಗೆ ಆಧಾರದಲ್ಲಿ ಮೇಲೆ ನೀಡಿದ ಜಮೀನುಗಳಿಗೆ ಸಾಲ ಸೌಲಭ್ಯವನ್ನು ರಾಷ್ಟಿçÃಕೃತ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್ ಗಳಿಂದ ಕೊಡುವ ಕುರಿತು ಹಾಗೂ ಕಾಫಿ ಮತ್ತು ಇತರ ಬೆಳೆಗಾರನಿಗೆ ಗುತ್ತಿಗೆ ಆಧಾರದ ಮೇಲೆ ಒತ್ತುವರಿ ಜಮೀನನ್ನು ನೀಡಿದ ಮೇಲೆ ಅವರ ಮರಣ ನಂತರ ವಾರಸುದಾರರಿಗೆ ಗುತ್ತಿಗೆ ವರ್ಗಾವಣೆ ಮಾಡಬೇಕು ಹಾಗೂ ಬೆಳೆಗಾರ ಮೂಲ ಕಾಫಿ ಜಮೀನು ಮಾರಿದರೆ ಅದರ ಜೊತೆಯಲ್ಲಿ ಬರುವ ಗುತ್ತಿಗೆ ಜಮೀನಿನ್ನು ಖರೀದಿಗಾರನಿಗೆ ಸರ್ಕಾರದ ಕರಾರಿನಂತೆ ಮುಂದುವರೆಸಿಕೊAಡು ಹೋಗುವ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ.

ಹಳೆಯ ಅರೇಬಿಕಾ ಮತ್ತು ರೋಬಸ್ಟಾ ಗಿಡಗಳನ್ನು ತೆಗೆದು ಹೊಸಗಿಡಗಳನ್ನು ತೆಗೆದು ಹೊಸಗಿಡ ಮರುನಾಟಿ ಮಾಡಿದ ಹಾಗೂ ಶೀಘ್ರ ಫಸಲಿಗೆ ಬರುವ ತಳಿಗಳನ್ನು ಬೆಳೆದಿರುವುದನ್ನು ಪರಿಗಣಿಸಿ ಗುತ್ತಿಗೆ ಆಧಾರದ ಮೇಲೆ , ಕಾಫಿ ಬೆಳೆದಿರುವ ಭೂಮಿ ಅಂದರೆ ಮೀಸಲು ಅರಣ್ಯ ಹೊರತುಪಡಿಸಿ ಬೇರೆ ಯಾವುದೇ ವರ್ಗಕ್ಕೆ ಸೇರಿದ್ದರೆ ಅದನ್ನು ಸಹ ಗುತ್ತಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ರಾಜ್ಯ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಕುಮಾರ್ ತಿಳಿಸಿದ್ದಾರೆ.

ಪ್ಲಾಂಟೇಷನ್ ಬೆಳೆಗಾರರಿಗೆ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕುರಿತು ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ವಿಶೇಷವಾಗಿ ಕಂದಾಯ ಸಚಿವ ಆರ್. ಅಶೋಕ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆದು ಅಭಿನಂದಿಸಲಾಗುವುದು. ಜತೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕರಾದ ಎಚ್.ಕೆ. ಕುಮಾರ ಸ್ವಾಮಿ, ಎಂ.ಪಿ. ಕುಮಾರ ಸ್ವಾಮಿ, ಟಿ.ಡಿ. ರಾಜೇಗೌಡ. ಇನ್ನಷ್ಟು ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳನ್ನು ಅಭಿನಂದಿಸುವುದಾಗಿ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.