ಮಡಿಕೇರಿ, ಫೆ. ೨೧: ಹೊಸೂರು ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ವಾರ್ಡ್೧ ರ ವಾರ್ಡ್ಸಭೆ ತಾ. ೨೪ ರಂದು ಮಧ್ಯಾಹ್ನ ೩ ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ ಅಧ್ಯಕ್ಷ ಪಿ.ಎನ್. ಮಾದೇವ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಾರ್ಡ್ ೨ ಮತ್ತು ೩ ರ ಸಭೆ ಅಂದು ಸಂಜೆ ೫ ಗಂಟೆಗೆ ದುಬಾರೆ ತಮಿಳು ಶಾಲೆಯಲ್ಲಿ ವಾರ್ಡ್ ಅಧ್ಯಕ್ಷರುಗಳಾದ ಎಸ್.ಎ. ರತ್ನಸುಬ್ಬಯ್ಯ ಹಾಗೂ ವಿಶಾಲಾಕ್ಷಿ ಅವರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ವಾರ್ಡ್ ೪ರ ಸಭೆ ತಾ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಅಧ್ಯಕ್ಷೆ ಸುಶೀಲ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಹೊಸೂರು ಗ್ರಾ.ಪಂ.ಯ ೨೦೨೨-೨೩ನೇ ಸಾಲಿನ ೨ನೇ ಹಂತದ ಗ್ರಾಮಸಭೆ ಮಾರ್ಚ್ ೬ ರಂದು ಪೂರ್ವಾಹ್ನ ೧೧ ಗಂಟೆಗೆ ಹೊಸೂರು ಬೆಟ್ಟಕೇರಿ ಸರಕಾರಿ ಶಾಲೆಯ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಶಾಂತಿ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.