ವೀರಾಜಪೇಟೆ, ಫೆ. ೨೧: ಮೈಸೂರಿನ ನಾರಾಯಣ ಆಸ್ಪತ್ರೆ ಮತ್ತು ವೀರಾಜಪೇಟೆಯ ದಂತ ವೈದ್ಯಕೀಯ ಕಾಲೇಜು ಸಹಭಾಗಿತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಯಿತು.
ನಗರದ ಮಾರಿಯಮ್ಮ ದೇವಾಲಯದಿಂದ ಜಾಥಾ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿತು. ಜಾಥಾಕ್ಕೆ ಡಾ. ಕಾರ್ಯಪ್ಪ, ಡಾ. ಸುನಿಲ್ ಮುದ್ದಯ್ಯ ಚಾಲನೆ ನೀಡಿದರು.
ಮೈಸೂರಿನ ನಾರಾಯಣ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ನವೀನ್ ಅಣ್ವೇಕರ್ ಮಾತನಾಡಿ, ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.
ಈ ಸಂದರ್ಭ ನಾರಾಯಣ ಆಸ್ಪತ್ರೆಯ ವೈದ್ಯರಾದ ಡಾ. ನವೀನ್, ಡಾ. ವಿದ್ಯಾ, ಡಾ. ದೀಪಕ್, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಪ್ರಜ್ವಲ್ ಮತ್ತಿತರರು, ವೀರಾಜಪೇಟೆ ಡೆಂಟಲ್ ಕಾಲೇಜಿನ ವೈದ್ಯರಾದ ಡಾ. ಜತೀನ್, ಡಾ. ಗೌತಮ್ ಮತ್ತು ಡೆಂಟಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.