ವೀರಾಜಪೇಟೆ, ಫೆ. ೨೧: ಮರ ಕಸಿ ಮಾಡುವಾಗ ಮರದಿಂದ ಬಿದ್ದು ಮೃತಪಟ್ಟ ಘಟನೆ ಆರ್ಜಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಗದ್ದೆ ಹೊಸಳ್ಳಿ ಗ್ರಾಮದ ಅಂಜು (೨೫) ಮೃತ ದುರ್ದೈವಿ.

ಆರ್ಜಿ ಗ್ರಾಮದ ಅರ್ಜುನ ಎಂಬವರ ತೋಟದಲ್ಲಿ ಮರ ಕಸಿ ಮಾಡುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.