ಸೋಮವಾರಪೇಟೆ, ಫೆ. ೧೯: ಪರಿಸರಕ್ಕೆ ಮಾರಕವಾಗಿರುವ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಇಲ್ಲಿನ ಲಯನ್ಸ್ ಸಂಸ್ಥೆ ನಡೆಸಿದ ಅಭಿಯಾನಕ್ಕೆ ಉತ್ತಮ ಸ್ಪಂದನ ದೊರಕಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಒಂದೇ ದಿನ ೨೧೦ ಕೆ.ಜಿ. ಇ-ತ್ಯಾಜ್ಯ ಸಂಗ್ರಹಿಸುವ ಮೂಲಕ ಸಾರ್ವಜನಿ ಕರಲ್ಲಿ ಅರಿವು ಮೂಡಿಸಲಾಯಿತು.
ಉಪಯೋಗಕ್ಕೆ ಬಾರದೆ ಇರುವಂತಹ ಎಲೆಕ್ಟಾçನಿಕ್ ವಸ್ತುಗಳು, ಕಂಪ್ಯೂಟರ್ ಬಿಡಿ ಭಾಗಗಳು, ಕೆಟ್ಟು ಹೋಗಿರುವ ಎಲೆಕ್ಟಿçಕಲ್ ಉಪಕರಣಗಳು, ಮೊಬೈಲ್ಗಳು ಇತ್ಯಾದಿ ವಸ್ತುಗಳನ್ನು ಅಭಿಯಾನದ ಅಂಗವಾಗಿ ಸಂಗ್ರಹಿಸಲಾಯಿತು.
ಸೋಮವಾರಪೇಟೆಯ ಬಸವೇಶ್ವರ ರಸ್ತೆಯ ಎಸ್ಜೆಎಂ ಬಾಲಕಿಯರ ಪ್ರೌಢಶಾಲೆ ಬಳಿ, ಆನೆಕೆರೆ ಸಮೀಪ ಶಿವಕುಮಾರಸ್ವಾಮಿ ಬಸ್ ತಂಗುದಾಣದ ಬಳಿ, ಕಕ್ಕೆಹೊಳೆ ಜಂಕ್ಷನ್ ಹಾಪ್ಕಾಮ್ಸ್ ಸಮೀಪ, ತ್ಯಾಗರಾಜ ರಸ್ತೆಯ ಗಾಂಧಿ ವೃತ್ತದ ಸಮೀಪ ಇರುವ ಪೆಟ್ರೋಲ್ ಬಂಕ್ ಬಳಿ ಇ-ತ್ಯಾಜ್ಯ ಸಂಗ್ರಹಿಸಿ ಮಡಿಕೇರಿ ಲಯನ್ಸ್ ಕ್ಲಬ್ಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಸಂಸ್ಥೆ ಅಧ್ಯಕ್ಷ ಸಿ.ಕೆ. ರೋಹಿತ್, ಹಿರಿಯ ಪದಾಧಿಕಾರಿಗಳಾದ ಕೆ.ಎನ್. ತೇಜಸ್ವಿ, ಜಿ.ಟಿ. ಯೋಗೇಂದ್ರ, ಸಿ.ಕೆ. ಮಲ್ಲಪ್ಪ, ಬಿದ್ದಾಟಂಡ ಪವನ್, ಎ.ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು, ಇ-ತ್ಯಾಜ್ಯದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ, ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.