ಪೊನ್ನಂಪೇಟೆ : ಪೊನ್ನಂಪೇಟೆ ಕಾಟ್ರಕೊಲ್ಲಿ ಮಾತಾಯಿ ಪುರುಷರ ಸ್ವ ಸಹಾಯ ಸಂಘದ ವತಿಯಿಂದ ಇಲ್ಲಿನ ಬಸವೇಶ್ವರ ದೇವಸ್ಥಾನ ಮುಂಭಾಗ ಬಸ್ ನಿಲ್ದಾಣದಲ್ಲಿ ೧೭ ನೇ ವರ್ಷದ ಮಹಾ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ತತ್ವರೂಪಾನಂದಜೀ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ಅವರು ಮಾತನಾಡಿ ನಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಸಕಲರಿಗೂ ಶಿವನು ಸನ್ಮಂಗಳಗಳನ್ನು ಉಂಟು ಮಾಡಲಿ ಎಂದರು. ಮತ್ತೊಬ್ಬ ಅತಿಥಿ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಎ. ಎಸ್. ಪೊನ್ನಣ್ಣ ಅವರು ಮಾತನಾಡಿ ಮಾತಾಯಿ ಪುರುಷರ ಸ್ವ ಸಹಾಯ ಸಂಘ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು.

ಪೊನ್ನAಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ ಶಿವರಾತ್ರಿ ಆಚರಣೆಯ ವೇದಿಕೆ ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಯಾಗಿದೆ. ಈಗಾಗಲೇ ಸಂಘವು ರಾಜ್ಯ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಮತ್ತಷ್ಟು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ರಾಷ್ಟç ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕಾಕಮಾಡ ನಾಣಯ್ಯ ಪೂಣಚ್ಚ, ಕಿಗ್ಗಟ್ ನಾಡ್ ಹಿರಿಯ ನಾಗರೀಕ ವೇದಿಕೆಯ ಪ್ರಧಾನ ಪೊನ್ನಂಪೇಟೆ : ಪೊನ್ನಂಪೇಟೆ ಕಾಟ್ರಕೊಲ್ಲಿ ಮಾತಾಯಿ ಪುರುಷರ ಸ್ವ ಸಹಾಯ ಸಂಘದ ವತಿಯಿಂದ ಇಲ್ಲಿನ ಬಸವೇಶ್ವರ ದೇವಸ್ಥಾನ ಮುಂಭಾಗ ಬಸ್ ನಿಲ್ದಾಣದಲ್ಲಿ ೧೭ ನೇ ವರ್ಷದ ಮಹಾ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ತತ್ವರೂಪಾನಂದಜೀ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ಅವರು ಮಾತನಾಡಿ ನಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಸಕಲರಿಗೂ ಶಿವನು ಸನ್ಮಂಗಳಗಳನ್ನು ಉಂಟು ಮಾಡಲಿ ಎಂದರು. ಮತ್ತೊಬ್ಬ ಅತಿಥಿ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಎ. ಎಸ್. ಪೊನ್ನಣ್ಣ ಅವರು ಮಾತನಾಡಿ ಮಾತಾಯಿ ಪುರುಷರ ಸ್ವ ಸಹಾಯ ಸಂಘ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು.

ಪೊನ್ನAಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ ಶಿವರಾತ್ರಿ ಆಚರಣೆಯ ವೇದಿಕೆ ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಯಾಗಿದೆ. ಈಗಾಗಲೇ ಸಂಘವು ರಾಜ್ಯ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಮತ್ತಷ್ಟು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ರಾಷ್ಟç ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕಾಕಮಾಡ ನಾಣಯ್ಯ ಪೂಣಚ್ಚ, ಕಿಗ್ಗಟ್ ನಾಡ್ ಹಿರಿಯ ನಾಗರೀಕ ವೇದಿಕೆಯ ಪ್ರಧಾನ ಗೋಣಿಕೊಪ್ಪ ವರದಿ : ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ೮೭ ನೇ ಶಿವ ಜಯಂತಿ ಆಚರಿಸಲಾಯಿತು.

ಬ್ರಹ್ಮಕುಮಾರಿ ಬಿ.ಕೆ ಚಂದ್ರಿಕಾ ಉಪನ್ಯಾಸ ನೀಡಿದರು. ಶಿವರಾತ್ರಿಯ ಸತ್ಯ ಸಂದೇಶ ಹಾಗೂ ಶಿವಲಿಂಗ ದರ್ಶನದಲ್ಲಿ ಶಿವರಾತ್ರಿಯ, ಅಧ್ಯಾತ್ಮಿಕ ರಹಸ್ಯ ತಿಳಿಸಿಕೊಟ್ಟರು. ಶಿವರಾತ್ರಿಯ ಯಥಾರ್ಥ ಅರ್ಥ ತಿಳಿದು ಆಚರಿಸಿದರೆ ಮಹತ್ವಿಕೆ ದೊರೆಯಲಿದೆ. ಶಿವಪರಮಾತ್ಮ ಜನರ ಅಜ್ಞಾನ, ಅಂಧಕಾರವನ್ನು ನೀಗಿಸಿ ಜೀವನದಲ್ಲಿ ಬೆಳಕನ್ನು ತರುತ್ತಾನೆ. ಉಪವಾಸದ ಮಹತ್ವಿಕೆಯನ್ನು ವಿವರಿಸಿ, ಉಪ ಎಂದರೆ "ಹತ್ತಿರ" ವಾಸ ಎಂದರೆ "ಇರುವುದು" ಎಂದರೆ ಮನಸ್ಸು ಬುದ್ಧಿಯಿಂದ ಭಗವಂತನ ಸಮೀಪ ಇರುವುದು ಎಂಬ ಅರ್ಥವಿದೆ. ಅವಗುಣ ಹಾಗು ವಿಕಾರಗಳಿಂದ ಜಾಗರುಕುತೆಯಿಂದ ಇರುವುದೇ ಜಾಗರಣೆಯಾಗಿದೆ ಎಂದರು. ರಾಜಯೋಗದ ಮೂಲಕ ಮನಸ್ಸು ಬುದ್ಧಿಯನ್ನು ಶಿವಪರಮಾತ್ಮನಲ್ಲಿ ಜೋಡಿಸಿ ಅವನಿಂದ ಸರ್ವಗುಣ ಹಾಗೂ ಸರ್ವ ಶಕ್ತಿಗಳನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ರವರು ಶಿವ ಧ್ವಜಾರೋಹಣ ಮಾಡಿದರು. ಬ್ರಹ್ಮಕುಮಾರಿಗಳಾದ ಬಿ.ಕೆ ನಂದ ಹಾಗೂ ಸತೀಶ್ ಅವರು ದೈವಿಗೀತೆ ಹಾಡಿದರು. ಲಕ್ಷ್ಮಿ ಹಾಗೂ ವೈಷ್ಣವಿ ನೃತ್ಯ ಪ್ರದರ್ಶಿಸಿದರು. ಬಿಕೆ ಅಯ್ಯಪ್ಪ ಓಂ ಧ್ವನಿಯಾ ಮಹತ್ವಿಕೆ ತಿಳಿಸಿ ಅದರ ಅನುಭವ ಮಾಡಿಸಿದರು. ಬಿ.ಕೆ ಬಬಿತಾ, ಬಿಕೆ ಚೋಂದಮ್ಮ, ಬಿ.ಕೆ ಕಾಂತಿ, ಬಿ.ಕೆ ಕಾವೇರಿ ಇದ್ದರು.

ನಾಪೋಕ್ಲು: ಸಮೀಪದ ಬಿದ್ದಾಟಂಡ ವಾಡೆಯ ಮಹಾದೇವ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ರುದ್ರಾಭಿಷೇಕ, ಮಹಾ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಜಾಗರಣೆ, ರುದ್ರಾಭಿಷೇಕ ಮಹಾಪೂಜೆಗಳಲ್ಲಿ ಭಕ್ತರು ಪಾಲ್ಗೊಂಡಿದ್ದ ಅರ್ಚಕ ಕೀರ್ತೀಶ್ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿದ್ದಾಟಂಡ ಮುತ್ತಣ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಗುಡ್ಡೆಹೊಸುರು: ಕುಶಾಲನಗರದ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸಲಾಯಿತು. ಈ ಸಂದರ್ಭ ವೀರಾಜಪೇಟೆ ಕೇಂದ್ರದ ಕೋಮಲ ಅವರು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಅಲ್ಲದೆ ಕುಶಾಲನಗರ ಕೇಂದ್ರದ ಲಲಿತಮಣಿ ಅವರು ಪ್ರವಚನ ನೀಡಿದರು. ಡಿ.ವೈ.ಎಸ್‌ಪಿ ಗಂಗಾಧರಪ್ಪ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು. ಕುಶಾಲನಗರ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕುಮಾರಪ್ಪ, ನಿವೃತ್ತ ಪ್ರಾಂಶುಪಾಲ ಕೆಂಚಪ್ಪ ಹಾಜರಿದ್ದರು. ಶಿಕ್ಷಕಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕೇಂದ್ರದ ಎಲ್ಲಾ ಸದಸ್ಯರು ಹಾಜರಿದ್ದರು. ಮೊದಲಿಗೆ ಶಿವಲಿಂಗಕ್ಕೆ ಜ್ಯೋತಿ ಬೆಳಗಿಸಲಾಯಿತು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಭಕ್ತರು ಹಾಜರಿದ್ದರು. ಈ ಸಂದರ್ಭದಲ್ಲಿ ಸಾಮೂಹಿಕ ಶಿವಸ್ತುತಿ ನಡೆಸಲಾಯಿತು.

ರೇವೆಗೌಡನಕೊಪ್ಪಲು ಕೂಡಿಗೆ: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇವೆಗೌಡನ ಕೊಪ್ಪಲು ಗ್ರಾಮದಲ್ಲಿರುವ ಶ್ರೀ ಶನೇಶ್ಚರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ನುಡಿ ನಮನ ಪುಷ್ಪಾರ್ಚನೆ ಕಾರ್ಯಕ್ರಮವು ದೇವಾಲಯದ ಆವರಣದಲ್ಲಿ ನಡೆಯಿತು.

ಡಾ. ಶ್ರೀ ಶಿವಕುಮಾರ ಮಹಾಸ್ವಾಮಿ ಮತ್ತು ಡಾ. ಶ್ರೀ ಬಾಲ ಗಂಗಾಧರನಾಥ ಸ್ವಾಮಿ ಅವರುಗಳ ಭಾವಚಿತ್ರಕ್ಕೆ ಬಸವ ಪಟ್ಟಣದ ವಿರಕ್ತ ಮಠದ ಶ್ರೀ ಬಸವಲಿಂಗ ಸ್ವಾಮಿ, ಮತ್ತು ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶಸ್ವಾಮಿ ಪುಷ್ಪ ನಮನ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಪಿ. ಶಶಿಧರ್ ನೆರವೇರಿಸಿ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಧಾರ್ಮಿಕ ಆಚರಣೆಗಳು ಜನರ ಬದುಕಿಗೆ ದಾರಿ ದೀಪ. ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕಾದರೆ ಸಂಸ್ಕೃತಿ ಜೀವನದ ಮೌಲ್ಯಗಳನ್ನು ಅರ್ಥೈಸಿ ಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಡಾ, ಮಂಥರ್ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ಎಸ್. ಲೋಕೇಶ್ ಸಾಗರ್ ಮತ್ತು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೂರ್ತಿ ಮಾತನಾಡಿದರು.

ವೇದಿಕೆಯಲ್ಲಿ ತೊರೆನೂರು ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಪ್ಪ, ಹೆಬ್ಬಾಲೆ ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್, ನೀರು ಬಳಕೆದಾರ ಸಂಘದ ಅಧ್ಯಕ್ಷ ಟಿ ಕೆ ಪಾಂಡುರAಗ, ಶಿರಂಗಾಲ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಪ್ರಮುಖರಾದ ಸೋಮಶೇಖರ್, ಜಗದೀಶ್, ರಮೇಶ್, ಮಲ್ಲಿಕಾ, ವಸಂತ, ಕುಮಾರ್, ಗ್ರಾಮ ಪಂಚಾಯತಿ ಸದಸ್ಯೆ ನೀಗಾಜಮ್ಮ ಸೇರಿದಂತೆ ಗ್ರಾಮ ದ ಪ್ರಮುಖರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ದೇವಾಲಯ ಸಮಿತಿಯ ಕಾರ್ಯದರ್ಶಿ ಕೆ. ಎಸ್. ಕೃಷ್ಣಗೌಡ ವಹಿಸಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಚಲನಚಿತ್ರ ಸಹಕಲಾವಿದರಾದ ಕುಮಾರ್ ಅರಸೇಗೌಡ ಮಿತ್ರ ಬಳಗದ ವತಿಯಿಂದ ಹಾಸ್ಯ ಬರಿತ ನಗೆ ನಾಟಕವಾದ ‘ಮಿಸ್ಟರ್ ಗುಂಡಣ್ಣ’ ಎಂಬ ನಾಟಕವನ್ನು ಅಭಿನಯಿಸಲಾಯಿತು. ಪೂಜಾ ಕಾರ್ಯಕ್ರಮ ಮತ್ತು ನುಡಿನಮನ ಕಾರ್ಯಕ್ರಮಕ್ಕೆ ತೊರೆನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಸಾರ್ವಜನಿಕರು, ಭಕ್ತರು ಆಗಮಿಸಿದ್ದರು.

ನೆಲ್ಲಿಹುದಿಕೇರಿ ಮುತ್ತಪ್ಪ ಯುವ ಕಲಾ ಸಂಘ

ಸಿದ್ದಾಪುರ : ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಶಿವರಾತ್ರಿ ಜಾಗರಣ ಮಹೋತ್ಸವ ಏರ್ಪಡಿಸಲಾಗಿತ್ತು. ಮುಖ್ಯ ಭಾಷಣಕಾರರಾಗಿ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಆಗಮಿಸಿ ಮಾತನಾಡಿ ಪೋಷಕರು ತಮ್ಮ ಮನೆಯಲ್ಲಿ ಮಕ್ಕಳಿಗೆ ಹಿಂದೂ ಧರ್ಮದ ಆಚಾರ ವಿಚಾರ, ಗ್ರಂಥಗಳು, ಇತಿಹಾಸದ ಬಗ್ಗೆ ಅರಿವನ್ನು ಮೂಡಿಸಬೇಕು. ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಹೇಳಿದರು.

ಶ್ರೀ ಮುತ್ತಪ್ಪ ಯುವಕಲಾ ಸಂಘದ ಅಧ್ಯಕ್ಷ ಶರಣ್ ಮಾತನಾಡಿ ಸಂಘದಿAದ ಮುಂದಿನ ದಿನಗಳಲ್ಲಿ ಹಿಂದೂ ಹೆಣ್ಣು ಮಕ್ಕಳಿಗಾಗಿ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗುವುದಾಗಿ ಹೇಳಿದರು. ಕಾರ್ಯಕ್ರಮದ ಅಂಗವಾಗಿ ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಮಹಿಳೆಯರು ಹಾಗೂ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ತಾಲಪೊಲಿ ಹಿಡಿದು, ಚಂಡೆ ವಾದ್ಯ ಮೇಳಗಳೊಂದಿಗೆ ನೆಲ್ಲಿಹುದಿಕೇರಿಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ಉತ್ಸವದ ಅಂಗವಾಗಿ ಪುಟಾಣಿಗಳು ಶಿವ, ಪಾರ್ವತಿ, ರಾಧೆ, ನೇತಾಜಿ ವೇಷಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಾಜಪೇಟೆಯ ಟೀಂ ಇಂಟೋಪೀಸ್ ನೃತ್ಯ ತಂಡ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉತ್ಸವದ ಪ್ರಯುಕ್ತ ಅನ್ನದಾನ ಏರ್ಪಡಿಸಲಾಗಿತ್ತು. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮುತ್ತಪ್ಪ ಯುವಕಲಾ ಸಂಘದ ಮಾಜಿ ಅಧ್ಯಕ್ಷ ಎನ್. ಆರ್. ಪ್ರಕಾಶ್ ವಹಿಸಿದ್ದರು. ಗೋಣಿಕೊಪ್ಪಲು : ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಕಾವೇರಿ ಹಿಲ್ಸ್ ಬಡಾವಣೆಯ ಕಾವೇರಿ ಸಂಘದ ವತಿಯಿಂದ ಶಿವರಾತ್ರಿ ಅಂಗವಾಗಿ ಸಾಂಸ್ಕೃತಿಕ ಹಾಗೂ ಸೌಹಾರ್ದ ಕೂಟ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಹಬ್ಬಗಳ ಆಚರಣೆಯಿಂದ ಪರಸ್ಪರ ಒಂದುಗೂಡಬಹುದು. ಇದರಿಂದ ಶಾಂತಿ, ಸಾಮರಸ್ಯ ಮೂಡಿ ಸೌಹರ್ದತೆಯ ಸಮಾಜ ನಿರ್ಮಾಣವಾಗುತ್ತದೆ. ಆಚಾರ-ವಿಚಾರ, ಸಂಸ್ಕೃತಿ ಉಳಿವಿಗೆ ಒಂದಾಗುವAತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ, ಹೈಕೋರ್ಟ್ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮಾತನಾಡಿ, ಸರ್ವಧರ್ಮವನ್ನು ಒಗ್ಗೂಡಿಸುವಂತ ಈ ರೀತಿಯ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. ಸೌಹರ್ದತೆಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೇಳಿದರು. ಉದ್ಯಮಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಕಳೆದ ೧೭ ವರ್ಷಗಳ ಹಿಂದೆ ಕಾವೇರಿ ಸಂಘವು ಉದಯವಾಗಿದ್ದು ಎಲ್ಲಾ ಧರ್ಮೀಯರು ಒಟ್ಟಾಗಿ ಇರುವ ಮೂಲಕ ಮಾದರಿ ಬಡಾವಣೆ ಆಗಿದೆ. ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಉತ್ತಮ ಬೆಳವಣಿಗೆ ಎಂದರು.

ಪೊನ್ನAಪೇಟೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಇತ್ತೀಚಿಗೆ ರಾಜ್ಯ ಪ್ರಶಸ್ತಿಗೆ ಭಾಜನರಾದ ತಿರುನೆಲ್ಲಿಮಾಡ ಜೀವನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು, ಸದಸ್ಯರು ಗಳಾದ ನೂರೇರ ರತಿ ಅಚ್ಚಪ್ಪ, ಹಕ್ಕೀಂ, ಇಂಜಿನಿಯರಿAಗ್ ಪದವಿ ಪೂರೈಸಿದ ಬಡಾವಣೆಯ ವಿದ್ಯಾರ್ಥಿಗಳಾದ ಆರ್. ರೋಶನ್, ಬಿ.ಎ.ಸಚಿನ್, ಪಿ.ಇ. ಸಂಶೀರ, ಆರ್. ನಿರನ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾವೇರಿ ಸಂಘದ ಅಧ್ಯಕ್ಷ ಶಾಂತೆಯAಡ ಮಧು ಮಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ಕುಲ್ಲಚಂಡ ಪ್ರಮೋದ್ ಗಣಪತಿ, ಸಂಘದ ಗೌರವಾಧ್ಯಕ್ಷ ಥೋಮಸ್, ಪ್ರಧಾನ ಕಾರ್ಯದರ್ಶಿ ರಫೀಕ್, ಖಜಾಂಜಿ ಚೋನಿರ ಸತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕನ್ನಿಕಾ ಪ್ರಶಾಂತ್ ಪ್ರಾರ್ಥಿಸಿ, ಸೌಮ್ಯ ಕೃಷ್ಣ ಸ್ವಾಗತಿಸಿ, ಅಲೀಮ ನಿರೂಪಿಸಿ, ವಂದಿಸಿದರು. ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ಜೊತೆಗೆ ಬಡಾವಣೆಯ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಾದುಗಾರ್ ರಾಜೇಶ್ ಅವರಿಂದ ಜಾದು ಪ್ರದರ್ಶನ ಮೂಡಿಬಂತು.