ಮಡಿಕೇರಿ, ಫೆ. ೨೦: ಕೊಡವಾಮೆರ ಕೊಂಡಾಟ ಸಂಘಟನೆಯ ವತಿಯಿಂದ ಕೊಡವ ಕುಟುಂಬಗಳ ನಡುವಿನ ದ್ವಿತೀಯ ವರ್ಷದ ಬಾಳೋಪಾಟ್‌ರ ಬಂಬAಗ ಜನಪದೀಯ ಸ್ಪರ್ಧೆ ನಡೆಯಲಿದೆ.

ಅಂತರ್‌ಜಾಲದ ಮೂಲಕ ಸಂಘಟನೆ ಈ ವಿಶಿಷ್ಟ ಸ್ಪರ್ಧೆಯ ಚಿಂತನೆ ನಡೆಸಿದ್ದು, ೨೦೨೧ರಲ್ಲಿ ಪ್ರಥಮ ವರ್ಷದ ಸ್ಪರ್ಧೆ ನಡೆಸಲಾಗಿತ್ತು. ಕೊಡವ ಸಂಸ್ಕೃತಿಯಲ್ಲಿ ಮಹತ್ವದ್ದಾಗಿರುವ ಬಾಳೋಪಾಟ್ ಅನ್ನು ಉಳಿಸಿ ಬೆಳೆಸುವುದರೊಂದಿಗೆ ಈಗಿನ ಯುವ ಪೀಳಿಗೆಯಲ್ಲೂ ಈ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಮುಂದಾಗಲಾಗಿದೆ.

ಪ್ರಥಮ ವರ್ಷದ ಸ್ಪರ್ಧೆಯಲ್ಲಿ ೬೦ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿತ್ತು. ೨೪ ಕುಟುಂಬಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಈ ಬಾರಿ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇರುವುದಾಗಿ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.

ಆಸಕ್ತ ಕುಟುಂಬಗಳು ಮಾರ್ಚ್ ೧೦ರ ಒಳಗಾಗಿ ತಮ್ಮ ಕುಟುಂಬದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರ ಏಪ್ರಿಲ್ ೨೦ರ ಒಳಗಾಗಿ ೨೦ ನಿಮಿಷಕ್ಕೆ ಮೀರದಂತೆ ಕಾವೇರಮ್ಮೆಯ ಪಾಟನ್ನು, ಒಂದೇ ಒಕ್ಕದ ನಾಲ್ವರು, ಒಂದೇ ಬಣ್ಣದ ಕುಪ್ಯಚಾಲೆ ಮತ್ತು ದುಡಿಕೊಟ್ಟ್ನೊಂದಿಗೆ ಹಾಡಿ, ವಿಡಿಯೋವನ್ನು ಸಂಚಾಲಕ ಕುಂಞರ ಗಿರೀಶ್ ಭೀಮಯ್ಯ ಅವರಿಗೆ (ವಾಟ್ಸ್ಪ್‌ನ ಸಂಖ್ಯೆ ೯೪೮೩೫೩೪೪೮೧) ಕಳುಹಿಸಬೇಕು.

ವಿಜೇತ ಕುಟುಂಬಕ್ಕೆ ಪ್ರಥಮ ರೂ. ೧೦,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ರೂ. ೮೦೦೦ ನಗದು ಮತ್ತು ಟ್ರೋಫಿ, ತೃತೀಯ ರೂ. ೬,೦೦೦ ನಗದು ಮತ್ತು ಟ್ರೋಫಿ ಹಾಗೂ ಇನ್ನಿತರ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಬಹುಮಾನವನ್ನು, ಉದ್ಯಮಿ ಸರ್ಕಂಡ ದೊರೆಮಣಿ ಸೋಮಯ್ಯ, ದ್ವಿತೀಯ ಬಹುಮಾನವನ್ನು ಉದ್ಯಮಿ ಮಲ್ಲೇಂಗಡ ಸುಧಾಮುತ್ತಣ್ಣ, ತೃತೀಯ ಬಹುಮಾನವನ್ನು ಉದ್ಯಮಿ ಅಂಜಪರವAಡ ರಂಜು ಮುತ್ತಪ್ಪ ಅವರು ಪ್ರಾಯೋಜಿಸಲಿದ್ದಾರೆ.

ಕೊಡವ ಇತಿಹಾಸದ ಅಲಿಖಿತ ಸಂವಿಧಾನ ಮತ್ತು ಸಂಪ್ರದಾಯ ಪರಂಪರೆಯ ದಾರಿದೀಪದಂತಿರುವ ಜಾನಪದ ಆಧಾರದ ಬಾಳೋ ಪಾಟ್ ಅನ್ನು ಜನ ಮಾನಸದಲ್ಲಿ ಮತ್ತೊಮ್ಮೆ ವಿಜೃಂಭಿಸುವAತೆ ಮಾಡುವ ನಿಟ್ಟಿನಲ್ಲಿ ಸಂಘಟನೆಯು ನಡೆಸುತ್ತಿರುವ ಕೌಟುಂಬಿಕ ಬಾಳೋ ಪಾಟ್ ಸ್ಪರ್ಧೆಯಲ್ಲಿ ಎಲ್ಲಾ ಕೊಡವ ಕುಟುಂಬಗಳು ಪಾಲ್ಗೊಳ್ಳುವ ಮೂಲಕ, ಜಾನಪದ ಪರಂಪರೆಯ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವುದರೊಂದಿಗೆ ವಿಶ್ವದಗಲ ಪಸರಿಸಲು ಕೈಜೋಡಿಸಬೇಕೆಂದು ಸಂಘಟನೆ ಪದಾಧಿಕಾರಿಗಳು ಕೋರಿದ್ದಾರೆ.