ಗೋಣಿಕೊಪ್ಪ, ಫೆ. ೨೦: ಹುದಿಕೇರಿಯ ಬೊಜ್ಜಂಗಡ ಸುನಿಲ್ ಅವರ ಕೆರೆಯಲ್ಲಿ ಅಂದಾಜು ೩೫ರಿಂದ ೪೦ ವರ್ಷದೊಳಗಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿ ಕೆಂಪು ಬಣ್ಣದ ಶರ್ಟ್ ಧರಿಸಿದ್ದು, ಸದೃಢ ಮೈಕಟ್ಟು ಹೊಂದಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಸುದಾರರಿದ್ದಲ್ಲಿ ೯೪೮೦೮೦೪೯೬೦ ಸಂಖ್ಯೆಗೆ ಕರೆ ಮಾಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.