ಕುಶಾಲನಗರ, ಫೆ. ೧೯: ಕುಶಾಲನಗರದ ಮಾಜಿ ಸೈನಿಕರು, ಪುಲ್ವಾಮ ದಾಳಿಯಲ್ಲಿ ಹುತ್ಮಾತ್ಮರಾದವರಿಗೆ ಕ್ಯಾಂಡಲ್ ಹಚ್ಚಿ ಗೌರವ ಸಮರ್ಪಿಸಿದರು. ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ ಮಾಜಿ ಯೋಧರಾದ ಕ್ಯಾಪ್ಟನ್ ಎ.ಪಿ. ಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಸುಧೀರ್, ಎ.ಕೆ. ಶೇಖರನ್, ಎನ್.ಕೆ. ತಮ್ಮಯ್ಯ, ಮೊಹಮ್ಮದ್ ನಭಿ, ಎ.ಯು. ಧರ್ಮಕುಮಾರ್ ಮತ್ತಿತರರು ಹುತಾತ್ಮರ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದರು. ಸ್ಥಳೀಯ ಪುರಸಭೆ ಮತ್ತು ಇತರ ಸಂಘ-ಸAಸ್ಥೆಗಳಿAದ ಪುಲ್ವಾಮಾ ಹುತಾತ್ಮ ಯೋಧರ ಸ್ಮರಣೆ ಬಗ್ಗೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.