ಮಡಿಕೇರಿ, ಫೆ. ೧೯: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವವು ಮಾ. ೧ ರಿಂದ ೧೧ ರವರೆಗೆ ನಡೆಯಲಿದೆ.
ಮಾ.೧ ರಾತ್ರಿ ೮ ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಗುವುದು. ೨ರಂದು ಬೆಳಗ್ಗೆ ೧೧ ಗಂಟೆಯಿAದ ನಿತ್ಯ ಪೂಜೆ, ಸಂಜೆ ೭ ಗಂಟೆಗೆ ತೂಚಂಬಲಿ, ತಾ. ೩ರಂದು ಪ್ರಾತ:ಕಾಲ ೫ ಗಂಟೆಗೆ ಉತ್ಸವ ಮೂರ್ತಿ ದರ್ಶನ, ೧೧ ಗಂಟೆಯಿAದ ನಿತ್ಯ ಪೂಜೆ, ಸಂಜೆ ೭ ಗಂಟೆಗೆ ತೂಚಂಬಲಿ, ತಾ. ೪ ರಂದು ಪ್ರಾತಃಕಾಲ ೫ ಗಂಟೆಗೆ ಉತ್ಸವಮೂರ್ತಿ ದರ್ಶನ, ಬೆಳಗ್ಗೆ ೧೦ ಗಂಟೆಗೆ ಭಂಡಾರ ಬರುವುದು, ೧೧ ಗಂಟೆಯಿAದ ನಿತ್ಯ ಪೂಜೆ ಸಂಜೆ ೭ ಗಂಟೆಗೆ ತೂಚಂಬಲಿ, ತಾ. ೫ ರಂದು ಪ್ರಾತಃಕಾಲ ೫ ಗಂಟೆಗೆ ಇರುಬಳಕು, ೧೧ ಗಂಟೆಯಿAದ ನಿತ್ಯಪೂಜೆ ಮತ್ತು ತುಲಾಭಾರ ಸೇವೆ ಮತ್ತು ಸಂಜೆ ೭ ಗಂಟೆಗೆ ತೂಚಂಬಲಿ ನಡೆಯಲಿದೆ.
ತಾ. ೬ ರಂದು ಪ್ರಾತ:ಕಾಲ ೫ ಗಂಟೆಗೆ ಇರುಬಳಕು, ಬೆಳಿಗ್ಗೆ ೧೧ ಗಂಟೆಯಿAದ ನಿತ್ಯ ಪೂಜೆ, ತುಲಾಭಾರ, ೭ರಂದು ಪ್ರಾತಃಕಾಲ ೫ ಗಂಟೆಗೆ ಇರುಬಳಕು, ಬೆಳಿಗ್ಗೆ ೧೧ ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಸಂಜೆ ೭ ಗಂಟೆಗೆ ತೂಚಂಬಲಿ, ಉತ್ಸವ ಮೂರ್ತಿ ದರ್ಶನ, ೮ ರಂದು ಪ್ರಾತಃಕಾಲ ೫ ಗಂಟೆಗೆ ಇರುಬಳಕು, ಬೆಳಗ್ಗೆ ೧೧ ಗಂಟೆಯಿAದ ನಿತ್ಯ ಪೂಜೆ, ಹರಕೆ ಬಳಕು, ತುಲಾಭಾರ ಸೇವೆ, ಸಂಜೆ ೭ ಗಂಟೆಗೆ ತೂಚಂಬಲಿ ಮತ್ತು ಉತ್ಸವಮೂರ್ತಿ ದರ್ಶನ ಇರಲಿದೆ.
ತಾ. ೯ ರಂದು ಪ್ರಾತಃಕಾಲ ೫ ಗಂಟೆಗೆ ಇರುಬಳಕು, ಹರಕೆ ಬಳುಕಿನ ಪ್ರಸಾದ ವಿತರಣೆ, ಬೆಳಿಗ್ಗೆ ೧೧ ಗಂಟೆಗೆ ನಿತ್ಯಪೂಜೆ, ಹರಕೆ ಬಳಕು, ತುಲಾಭಾರ, ಸಂಜೆ ೭ ಗಂಟೆಗೆ ತೂಚಂಬಲಿ, ಉತ್ಸವಮೂರ್ತಿ ದರ್ಶನ, ತಾ. ೧೦ ರಂದು ಪ್ರಾತಃಕಾಲ ಇರುಬಳಕು, ಹರಕೆ ಬೆಳಕಿನ ಪ್ರಸಾದ ವಿತರಣೆ, ಬೆಳಗ್ಗೆ ೧೧ ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಸಂಜೆ ೫ ಗಂಟೆಗೆ ‘ನೆರÀಪು’, ರಾತ್ರಿ ೮ ಗಂಟೆಗೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ, ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ನಿತ್ಯ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ತುಲಾಭಾರ, ಮಧ್ಯಾಹ್ನ ೩ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ ೫ ಗಂಟೆಗೆ ದೇವರ ಉತ್ಸವಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವಮೂರ್ತಿ ದರ್ಶನ, ನಂತರ ವಸಂತ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಸಂಜೆ ೬ಗಂಟೆಯಿAದ ರಾತ್ರಿ ೮.೩೦ ರವರೆಗೆ ಭೋಜ ಸೌಂಡ್ಸ್ ಹುಣಸೂರು ಇವರ ಪ್ರಾಯೋಜಕತ್ವದಲ್ಲಿ ಜೀ಼ ಕನ್ನಡದವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತಾ. ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೊಡಿಮರ ಇಳಿಸುವುದು. ೧೧ ಗಂಟೆಯಿAದ ಎಂದಿನAತೆ ನಿತ್ಯ ಪೂಜೆ ನಡೆಯಲಿದೆ. ತುಲಾಭಾರ ಸೇವೆ ಮಾಡಿಸುವವರು ಅಕ್ಕಿ, ಬೆಲ್ಲ, ಎಣ್ಣೆ, ತರಕಾರಿ ಇತ್ಯಾದಿ ವಸ್ತುಗಳನ್ನು ಭಕ್ತಾದಿಗಳು ತರಬೇಕು. ತುಲಾಭಾರ ಸೇವೆಯು ತಾ. ೫ ರಿಂದ ೧೧ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ೮೧೯೭೮ ೭೦೦೫೮ ಸಂಪರ್ಕಿಸಬಹುದು.