ಮದೆನಾಡು, ಫೆ. ೧೯: ಮಡಿಕೇರಿ - ಮಂಗಳೂರು ರಾಷ್ಟಿçÃಯ ಹೆದ್ದಾರಿ ನಡುವಿನಲ್ಲಿ ತಾ. ೧೮ರ ರಾತ್ರಿ ಗಾಜು ಹೊತ್ತು ಮೈಸೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಲಾರಿ (ಕೆಎ-೦೯, ಎಎ-೩೮೮೧)ಯು ಜೋಡುಪಾಲದ ಬಳಿ ರಸ್ತೆಗೆ ಅಡ್ಡಲಾಗಿ ಮಗುಚಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಜಾನೆ ಕ್ರೇನ್ ಸಹಾಯದಿಂದ ಪೊಲೀಸರ ಸಮ್ಮುಖದಲ್ಲಿ ಲಾರಿಯನ್ನು ಮೇಲೆತ್ತಲಾಯಿತು. ಅಂದಾಜು ಸುಮಾರು ೧೦ ಲಕ್ಷ ರೂ. ಮೌಲ್ಯದ ವಸ್ತುಗಳು ನಷ್ಟವಾಗಿದೆ.