ನಾಪೋಕ್ಲು, ಫೆ. ೧೭: ಸಮೀಪದ ಕೊಂಡAಗೇರಿ ದರ್ಗಾ ಶರೀಫ್ ಉರೂಸ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು. ಸೈಯದ್ ಹಸನ್ ಅಟಕೋಯ ಹಾಗೂ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಉರೂಸ್‌ಗೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಸೈಯದ್ ಹಸನ್ ಅಟಕೋಯ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕುಟುಂಬ ಪರಂಪರೆಯ ಸಂತತಿ ಒಬ್ಬರು ಇಲ್ಲಿ ಸಮಾಧಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಮಹಾತ್ಮರು ಬೋಧಿಸಿದ ಮಾನವೀಯ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಜಮಾಯತ್ ಅಧ್ಯಕ್ಷ ಪಿ.ಇ. ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಹಾಯಕ ಖಾಜಿ ಕೆ.ಎಸ್. ಶಾದುಲಿ ಫೈಝಿ, ತಕ್ಕ ಮುಖ್ಯಸ್ಥ ಅಹಮದ್ ಮುಸ್ಲಿಯಾರ್, ಕೆ., ಇಕ್ಬಾಲ್ ಎ.ಎಚ್, ಇಬ್ರಾಹಿಂ, ಉಪಾಧ್ಯಕ್ಷ, ಪಿ.ಎಚ್ ಅಬ್ಬಾಸ್ ಪ್ರಧಾನ ಕಾರ್ಯದರ್ಶಿ ಕೆ.ವೈ. ಮೊಹಮ್ಮದ್ ಹಾಜಿ, ಕೋಶಾಧಿಕಾರಿ ಎ.ಯಂ. ಅಬ್ದುಲ್ಲಾ, ಮುದರೀಸ್ ಜುನೈದ್ ಸಖಾಫಿ, ಖತೀಬ ಯಾಸಿರ್ ಸಖಾಫಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. - ದುಗ್ಗಳ.