ಮಡಿಕೇರಿ, ಫೆ. ೧೭: ಬ್ರಹ್ಮಕುಮಾರೀಸ್, ಮಡಿಕೇರಿ ಶಾಖೆಯ ದಾಸವಾಳ ರಸ್ತೆಯಲ್ಲಿರುವ ಲೈಟ್ ಹೌಸ್ ಸಭಾಂಗಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ತಾ. ೧೮ ರಂದು (ಇಂದು) ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ೮೭ನೇ ತ್ರಿಮೂರ್ತಿ ಶಿವ ಜಯಂತಿಯ ಪ್ರಯುಕ್ತ ಈಶ್ವರೀಯ ಸಂದೇಶ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರೀಜಿ ಅವರಿಂದ ಹಾಗೂ ಬ್ರಹ್ಮಕುಮಾರಿ ಧನಲಕ್ಷಿö್ಮ ಅವರಿಂದ ಮಹಾಶಿವರಾತ್ರಿಯ ಅಧ್ಯಾತ್ಮಿಕ ರಹಸ್ಯ ಹಾಗೂ ಬ್ರಹ್ಮಕುಮಾರಿ ಕೋಮಲ ಅವರಿಂದ ಸಾಮೂಹಿಕ ರಾಜಯೋಗದ ಅಭ್ಯಾಸವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.