ಮಡಿಕೇರಿ, ಫೆ. ೧೭: ಅಮ್ಮತ್ತಿನಾಡು ಬಿಳುಗುಂದ-ನಲ್ವತೋಕ್ಲು-ಹೊಸಕೋಟೆಗೆ ಸೇರಿದ ಬೋಂದ ಮುನ್ನೂರು ಒಕ್ಕ ಶ್ರೀ ಮಹದೇವರ ಹಬ್ಬವು ತಾ. ೧೮ ಹಾಗೂ ೧೯ ರಂದು ನಡೆಯಲಿದೆ.
ತಾ. ೧೮ ರಂದು ಬೆಳಿಗ್ಗೆ ೭.೩೦ ಗಂಟೆಗೆ ಗಣಪತಿ ಹೋಮ, ರಾತ್ರಿ ೮ ಗಂಟೆಗೆ ಮಹಾಪೂಜೆ, ಶಿವರಾತ್ರಿ ಪೂಜೆ ನಡೆಯಲಿದೆ. ತಾ. ೧೯ ರಂದು ಬೆಳಿಗ್ಗೆ ೫ ಗಂಟೆಗೆ ಇರ್ಬೊಳಕು, ೧೦ ಗಂಟೆಯಿAದ ವಿವಿಧ ಪೂಜೆ, ತಡಂಬು ನೃತ್ಯ, ಮಹಾಪೂಜೆ ನಡೆಯಲಿದೆ. ಸಾಯಂಕಾಲ ೫ ಗಂಟೆಗೆ ದೇವರ ಅವಭೃತ ಸ್ನಾನ, ತಡಂಬು ನೃತ್ಯ, ಮಹಾಪೂಜೆ, ವಸಂತಪೂಜೆ ನಡೆಯಲಿದೆ. ಎರಡು ದಿನಗಳೂ ಅನ್ನದಾನ ವ್ಯವಸ್ಥೆ ದಾನಿಗಳಿಂದ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.