ಮಡಿಕೇರಿ, ಫೆ. ೧೭: ಮಹಾರಾಷ್ಟçದ ಮುಂಬೈಯಲ್ಲಿ ನಡೆದ ರಾಷ್ಟçಮಟ್ಟದ ಅಬಾಕಸ್ ಮತ್ತು ಮೆಂಟಲ್ ಮ್ಯಾಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಮರಗೋಡುವಿನ ಕಾನಡ್ಕ ಹೆಚ್. ಧನ್ವಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಎಡುಸ್ಮಾರ್ಟ್ ಇಂಕ್ ಸಂಸ್ಥೆ ವತಿಯಿಂದ ನಡೆದ ರಾಷ್ಟçಮಟ್ಟದ ಅಬಾಕಸ್ ಮತ್ತು ಮೆಂಟಲ್ ಮ್ಯಾಥ್ಮೆಟಿಕ್ಸ್ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಧನ್ವಿ ದ್ವಿತೀಯ ಸ್ಥಾನ ಪಡೆದಿದ್ದು, ಈಕೆ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಮರಗೋಡುವಿನ ಕಾನಡ್ಕ ಹನೀಶ್ ಮತ್ತು ಆಶಾ ದಂಪತಿ ಪುತ್ರಿ.
ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಧನ್ವಿ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು. ಈಕೆ ಬೆಂಗಳೂರಿನ ಇನ್ನೋವೇಷನ್ ಇನ್ಸಿ÷್ಟಟ್ಯೂಟ್ನಿಂದ ತರಬೇತಿ ಪಡೆಯುತ್ತಿದ್ದಾಳೆ.