ಸೋಮವಾರಪೇಟೆ, ಫೆ. ೧೬ : ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ತಾ. ೧೮ ಮತ್ತು ೧೯ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
ತಾ.೧೮ರ ಬೆಳಿಗ್ಗೆ ೭.೩೦ಕ್ಕೆ ಶ್ರೀ ಸೋಮೇಶ್ವರ ಸನ್ನಿದಿಯಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಲಿದೆ. ೧೦.೩೦ಕ್ಕೆ ೧೨೧ ಕಳಶ ಪ್ರತಿಷ್ಠಾಪನೆ, ರುದ್ರಪಾರಾಯಣ ಪೂಜೆ ನಡೆಯಲಿದೆ. ರಾತ್ರಿ ೭ ಗಂಟೆಗೆ ವಿಶ್ವರೂಪ ವಾದ್ಯಗೋಷ್ಠಿ ಕಲಾ ತಂಡದಿAದ ಭಕ್ತಿಗೀತೆ ಸಂಗಮ, ತಾ.೧೯ರ ಬೆಳಿಗ್ಗೆ ೭.೩೦ರಿಂದ ರುದ್ರಹೋಮ ಸಂಕಲ್ಪ, ೮ ಉಪಕಲಶಗಳ ಪ್ರತಿಷ್ಠಾಪನೆ ಮತ್ತು ಅಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.