ಚೆಯ್ಯAಡಾಣೆ, ಫೆ. ೧೬: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಡಪಾಲ ಪ್ರೀಮಿಯರ್ ಲೀಗ್ ೯ ಕ್ರಿಕೆಟ್ ಪಂದ್ಯಾಟ ಆಯೋಜಿಸ ಲಾಗಿತ್ತು. ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ನೆನಪಿನಲ್ಲಿ ಕ್ರಿಕೆಟ್ ಆಯೋಜಿಸಲಾಗಿತ್ತು.
ಪಂದ್ಯಾಟದಲ್ಲಿ ವಿಲೇಜ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ ರನ್ರ್ಸ್ ಆಗಿ ರಾಯಲ್ ಚಾಲೆಂರ್ರ್ಸ್ ತಂಡವು ತೃಪ್ತಿಪಟ್ಟುಕೊಂಡಿತು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ವಿಲೇಜ್ ಪ್ಯಾಂಥರ್ಸ್ ತಂಡದ ಹ್ಯಾರಿಸ್ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ರೈಸಿಂಗ್ ಸ್ಟಾರ್ ತಂಡದ ತಬ್ ಸಿರ್ ಬಿ.ಎನ್ ಪಡೆದುಕೊಂಡರು.
ವಿಜೇತ ತಂಡಕ್ಕೆ ಬಹುಮಾನವನ್ನು ದಿವಂಗತ ಯೋಧ ಅಲ್ತಾಫ್ ಅಹ್ಮದ್ ಅವರ ಪತ್ನಿಯ ತಂದೆ ಎಡಪಾಲದ ಅಬ್ದುಲ್ ಸಲಾಂ ಪಿ. ವಿತರಿಸಿದರು.
ಈ ಸಂದರ್ಭ ಇ.ಪಿ.ಎಲ್ ಸ್ಥಾಪಕ ಅಧ್ಯಕ್ಷ ಹನೀಫ್, ಮುಸ್ಲಿಂ ಕಪ್ ಸ್ಥಾಪಕಾಧ್ಯಕ್ಷ ರಶೀದ್ ಕುಪ್ಪೋಡಂಡ, ಬಶೀರ್ ಕಿಕ್ಕರೆ, ಎನ್.ಎಚ್.ವೈ.ಎ ಮಾಜಿ ಅಧ್ಯಕ್ಷ ಬಷೀರ್ ಸಿ.ಎ. ರಫೀಕ್, ಮಜೀದ್, ಚಂದ್ರಶೇಖರ್, ಪತ್ರಕರ್ತ ಅಶ್ರಫ್, ಇಪಿಎಲ್ ಅಧ್ಯಕ್ಷ ಷಂಶುದ್ದೀನ್, ಹ್ಯಾರಿಸ್ ಕಿಕ್ಕರೆ, ರಫೀಕ್ ಕತಾರ್, ಅಚ್ಚು, ನಾಸರ್, ಶಾನೀಫ್, ನೌಫಲ್, ಆಶೀದ್ ಮತ್ತಿತರರು ಇದ್ದರು.