ಮಡಿಕೇರಿ, ಫೆ.೧೬ : ಶನಿವಾರಸಂತೆ ೬೬ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಶಕ್ತಿ ಪರಿವರ್ತಕದ ಕಾಮಗಾರಿ ಮತ್ತು ನಿರ್ವಹಣೆ ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ರವರು ನಿರ್ವಹಿಸಬೇಕಿರುವುದರಿಂದ ತಾ. ೧೭ ರಂದು (ಇಂದು) ಬೆಳಗ್ಗೆ ೧೦ ಗಂಟೆಯಿAದ ಸಂಜೆ ೦೫ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಹಂಡ್ಲಿ, ಕೊಡ್ಲಿಪೇಟೆ, ಶನಿವಾರಸಂತೆ, ಆಲೂರು, ಗೋಪಾಲಪುರ, ಬಲ್ಲಾರಳ್ಳಿ, ಕಿತ್ತೂರು ಗೌಡಳ್ಳಿ, ನಿಡ್ತ, ಮಣಜೂರು, ಬೀಟಿಕಟ್ಟೆ, ಅಂಕನಹಳ್ಳಿ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.