(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಫೆ. ೧೬: ದ.ಕೊಡಗಿನ ಬಹುತೇಕ ರೈತರ, ಕಾಫಿ ಬೆಳೆಗಾರರ ಕಾಫಿ ತೋಟ ಹಾಗೂ ತೋಟದ ಬೇಲಿ ಬಳಿಯ ಬದಿಯಲ್ಲಿ ಅರಣ್ಯ ಇಲಾಖೆಯು ತನ್ನ ಸರಹದ್ದು ಗುರುತುವಿಕೆಗಾಗಿ ಅಳವಡಿಸಿದ್ದ ಗಡಿ ಗುರುತು ಕಲ್ಲು ಕಂಬಗಳನ್ನು ತೆರವುಗೊಳಿಸಿದೆ.

ಕಳೆದ ಹಲವಾರು ದಿನಗಳ ಹಿಂದೆ ದ.ಕೊಡಗಿನ ಕಾನೂರು - ಲಕ್ಕುಂದ - ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ರಸ್ತೆ ಬದಿಯಲ್ಲಿ ಹಾಗೂ ಕಾಫಿ ಬೆಳೆಗಾರರ ಕಾಫಿ ತೋಟದಲ್ಲಿ ಯಾರ ಗಣನೆಗೂ ಬಾರದ ರೀತಿಯಲ್ಲಿ ಅರಣ್ಯ ಇಲಾಖೆಯು ತನ್ನ ಅರಣ್ಯ ವ್ಯಾಪ್ತಿಯನ್ನು ಗುರುತು ಮಾಡುವ ಕೆಲಸ ಕೈಗೆತ್ತಿಕೊಂಡಿತ್ತು.

ಈ ವೇಳೆ ಅರಣ್ಯ ಪ್ರದೇಶಕ್ಕೆ ಸೀಮಿತವಾಗಬೇಕಿದ್ದ ಕಲ್ಲು ಗುರುತುಗಳನ್ನು ರೈತರ ತೋಟದ ತೋಟದಲ್ಲಿ ಯಾರ ಗಣನೆಗೂ ಬಾರದ ರೀತಿಯಲ್ಲಿ ಅರಣ್ಯ ಇಲಾಖೆಯು ತನ್ನ ಅರಣ್ಯ ವ್ಯಾಪ್ತಿಯನ್ನು ಗುರುತು ಮಾಡುವ ಕೆಲಸ ಕೈಗೆತ್ತಿಕೊಂಡಿತ್ತು.

ಈ ವೇಳೆ ಅರಣ್ಯ ಪ್ರದೇಶಕ್ಕೆ ಸೀಮಿತವಾಗಬೇಕಿದ್ದ ಕಲ್ಲು ಗುರುತುಗಳನ್ನು ರೈತರ ತೋಟದ ಇಲಾಖೆಯ ಮಡಿಕೇರಿ ಸಿಸಿಎಫ್ ಬಿ.ಎನ್.ಎನ್. ಮೂರ್ತಿ ಹಾಗೂ ನಾಗರಹೊಳೆ ವನ್ಯ ಜೀವಿ ವಿಭಾಗದ ಎಸಿಎಫ್ ಗೋಪಾಲ್‌ರವರು ರೈತರ ತೋಟ ಹಾಗೂ ರಸ್ತೆ ಬದಿಯಲ್ಲಿರುವ ಕಲ್ಲು ಕಂಬಗಳನ್ನು ತೆರವುಗೊಳಿಸುವ ಭರವಸೆ ನೀಡಿದ್ದರು. ಇದೀಗ ದ.ಕೊಡಗಿನ ಕಾನೂರು - ಲಕ್ಕುಂದ - ಕೆ. ಬಾಡಗ ವ್ಯಾಪ್ತಿಯಲ್ಲಿ ರೈತರ ತೋಟದಲ್ಲಿ ಹಾಕಲಾಗಿದ್ದ ಗಡಿ ಗುರುತು ಕಂಬಗಳನ್ನು ತೆರವುಗೊಳಿಸಿದ್ದಾರೆ. ಕಾಂಕ್ರಿಟ್ ಬಳಸಿ ರಸ್ತೆಯ ಎರಡು ಬದಿಯಲ್ಲಿಯೂ ೫೦ ಮೀಟರ್‌ಗೆ ಒಂದರAತೆ ಕಾಂಕ್ರಿಟ್ ಕಲ್ಲುಗಳನ್ನು ಇದೀಗ ತೆರವುಗೊಳಿಸಿದ್ದು ಈ ಭಾಗದ ನೂರಾರು ರೈತರು ನಿರಾಳರಾಗಿದ್ದಾರೆ.