ಮಡಿಕೇರಿ, ಫೆ. ೧೬: ಮೂರ್ನಾಡು ಸಮೀಪದ ಕೊಂಡAಗೇರಿ ದರ್ಗಾ ಶರೀಫ್‌ನಲ್ಲಿ ಉರೂಸ್ ಕಾರ್ಯಕ್ರಮ ತಾ.೧೭ ರಿಂದ (ಇಂದಿನಿAದ) ೨೧ರವರೆಗೆ ಆಯೋಜಿಸಲಾಗಿದೆ ಎಂದು ಸುನ್ನಿ ಮುಸ್ಲಿಂ ಜಮಾಅತ್ ಸದಸ್ಯ ಪಿ.ಎಂ.ಹನೀಫ್ ಸಖಾಫಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.೧೭ ರಂದು ಅಪರಾಹ್ನ ೨ ಗಂಟೆಗೆ ಸಯ್ಯಿದ್ ಹಸನ್ ಆಟಕೋಯ ತಂಙಳ್ ಆದೂರು ದರ್ಗಾ ಅಲಂಕಾರ ಮತ್ತು ಸಾಮೂಹಿಕ ಪ್ರಾರ್ಥನೆಯ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಮಾಅತ್ ಅಧ್ಯಕ್ಷ ಪಿ.ಇ.ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದು, ರಾತ್ರಿ ೭ ಗಂಟೆಗೆ ಸಯ್ಯಿದ್ ಜಾಫರ್ ಸಾದಿಖ್ ಕುಂಬೋಲ್‌ರವರ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾ.೧೮ ರಂದು ರಾತ್ರಿ ೭ ಗಂಟೆಗೆ ‘ಅಂತರ್ಜಾಲದ ಬಳಕೆ ಮತ್ತು ಯೌವ್ವನ’ ಎಂಬ ವಿಷಯದಲ್ಲಿ ವಾಗ್ಮಿಗಳಾದ ಅನಸ್ ಸಿದ್ದೀಕಿ ಸಖಾಫಿ ಭೋದನೆ ನೀಡಲಿದ್ದು, ತಾ.೧೯ ರಂದು ರಾತ್ರಿ ೭ ಗಂಟೆಗೆ ನಮ್ಮ ಪರಂಪರೆ ಎಂಬ ವಿಷಯದಲ್ಲಿ ಗಣ್ಯರಾದ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಪ್ರವಚನ ನೀಡಲಿದ್ದಾರೆ. ಉರೂಸಿನ ಪ್ರಮುಖ ದಿನವಾದ ತಾ.೨೦ ರಂದು ಮಧ್ಯಾಹ್ನ ೧ ಗಂಟೆಗೆ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮವನ್ನು ಸಹಾಯಕ ಖಾಝಿಗಳಾದ ಶಾದುಲಿ ಫೈಝಿ ಉದ್ಘಾಟಿಸಲಿದ್ದಾರೆ. ಸಂಜೆ ೪ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದರು.

ತಾ.೨೦ ರಾತ್ರಿ ೭ ಗಂಟೆಗೆ ಮಹಾತ್ಮರುಗಳ ಮಾದರಿ ಬದುಕು ಎಂಬ ವಿಷಯದಲ್ಲಿ ವಾಗ್ಮಿಗಳಾದ ಮುಸ್ತಫಾ ಸಖಾಫಿ ತೆನ್ನಲ ಭಾಷಣ ಮಾಡಲಿದ್ದು, ತಾ.೨೧ ರಂದು ಬಹುಸಯ್ಯಿದ್ ಸುಹೈಲ್ ಅಸ್ಸಖಾಫ್‌ರವರ ನೇತೃತ್ವದಲ್ಲಿ ರಾತ್ರಿ ೭ ಗಂಟೆಗೆ ಉರೂಸ್ ಸಮಾರೋಪ ನಡೆಯಲಿದೆ. ನಂತರ ಬುರ್ದಾ, ಖವಾಲಿ, ದುಆ ಸಮ್ಮೇಳನ ನಡೆಯಲಿದೆ. ೫ ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಜಾತಿ, ಮತ, ಬೇಧವಿಲ್ಲದೆ ಸಹಕರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಇ.ಮೊಹಮ್ಮದ್ ಹಾಜಿ, ಉಪಾಧ್ಯಕ್ಷ ಪಿ.ಎಚ್.ಅಬ್ಬಾಸ್, ಸದಸ್ಯ ಪಿ.ಎಂ.ಅಬ್ಬಾಸ್ ಉಪಸ್ಥಿತರಿದ್ದರು.