ಸೋಮವಾರಪೇಟೆ, ಫೆ. ೧೫: ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗಕ್ಕೆ ಆಪ್ಟಿಕಲ್ ಚೇರ್ ಯೂನಿಟ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಲಬ್‌ನ ಜಿಲ್ಲಾ ಪ್ರಾಂತಪಾಲಕರಾದ ಕವಿತ ನಿಯಾತ್, ಸೋಮವಾರಪೇಟೆ ಕ್ಲಬ್ ಅಧ್ಯಕ್ಷೆ ಪ್ರೇಮ ಹೃಷಿಕೇಶ್, ಕಾರ್ಯದರ್ಶಿ ಅಮ್ರಿತಾ ಕಿರಣ್, ಖಜಾಂಚಿ ಶಿಲ್ಪಾಪ್ರಸಾದ್, ಪದಾಧಿಕಾರಿಗಳಾದ ರಾಜೇಶ್ವರಿ ಸುರೇಶ್, ತನ್ಮಯಿ ಪ್ರವೀಣ್, ಆಡಳಿತ ವೈದ್ಯಾಧಿಕಾರಿ ಡಾ. ಸತೀಶ್ ಇದ್ದರು. ನೇತ್ರ ತಜ್ಞ ನವೀನ್ ಅವರು ರೋಗಿಗಳ ತಪಾಸಣೆ ನಡೆಸಿದರು.