ಕೂಡಿಗೆ, ಫೆ. ೧೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಆನೆಕೆರೆ ಸಮೀಪ ಗ್ರಾಮಸ್ಥರು ಒಗ್ಗೂಡಿ ಮೈದಾನ ನಿರ್ಮಾಣ ಮಾಡಿದ್ದಾರೆ.

ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳಲ್ಲಿ ಸುಸಜ್ಜಿತ ಮೈದಾನದ ಕೊರತೆ ಕಾರಣ ಈ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರದ ಯಾವುದೇ ಅನುದಾನ ಪಡೆಯದೆ ಗ್ರಾಮಸ್ಥರೇ ತಮ್ಮ ಸ್ವಂತ ಖರ್ಚಿನಲ್ಲಿ ರೂ. ೫ ಲಕ್ಷ ವೆಚ್ಚದಲ್ಲಿ ಈ ಮೈದಾನ ನಿರ್ಮಿಸಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ.

ಗ್ರಾ.ಪA. ಸದಸ್ಯ ದಿನೇಶ್, ಮಾಜಿ ಉಪಾಧ್ಯಕ್ಷ ಸಿ.ಸಿ. ಸ್ವಾಮಿ ಅವರು ಈ ಮೈದಾನ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಈ ಭಾಗದ ಗ್ರಾಮಸ್ಥರು ಮೈದಾನ ಸುತ್ತಲೂ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂದರ್ಭ ಗ್ರಾ.ಪಂ. ಸದಸ್ಯೆ ಭಾಗ್ಯರವಿ, ತಾ.ಪಂ. ಮಾಜಿ ಸದಸ್ಯ ಗಣೇಶ್, ದಿಶಾ ಸಮಿತಿ ಸದಸ್ಯ ಆರ್.ಕುಮಾರಸ್ವಾಮಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಸಿ.ಸಿ. ಸ್ವಾಮಿ, ಗುಜೇಂದ್ರ, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್. ಪ್ರಭಾಕರ್, ಗ್ರಾಮಸ್ಥರಾದ ಶೇಖರ್, ರಾಧಾಕೃಷ್ಣ, ರೇವೇಗೌಡ, ಸಣ್ಣಪ್ಪ, ಗಣೇಶ್, ಕೃಷ್ಣಕಾಂತ್, ಜಗದೀಶ್, ಅಕ್ಷಯ್ ಮತ್ತಿತರರು ಇದ್ದರು.