ಗೋಣಿಕೊಪ್ಪಲು, ಫೆ. ೧೬: ದಕ್ಷಿಣ ಕೊಡಗಿನ ಕೆ. ಬಾಡಗ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಬಳಿಯ ಕಾಫಿ ತೋಟದಲ್ಲಿ ಎರಡು ಅಮಾಯಕ ಜೀವಗಳನ್ನು ಬಲಿ ತೆಗೆದಿದ್ದ ಘಟನೆಗೆ ಸಂಬAಧಿಸಿದAತೆ ಈ ಭಾಗದ ರೈತರ ಕಾಫಿ ತೋಟದಲ್ಲಿ ಹುಲಿಯ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ. ಹುಲಿಯ ಚಲನವಲನಗಳ ಬಗ್ಗೆ ಆಯಾಕಟ್ಟಿನ ಪ್ರದೇಶದಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದರೂ ೩ನೇ ದಿನದ ಕಾರ್ಯಾಚರಣೆಯಲ್ಲಿ ಹುಲಿ ಸಂಚಾರದ ಬಗ್ಗೆ ಯಾವುದೇ ಚಿತ್ರವೂ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಈಗಾಗಲೇ ಒಂದು ವ್ಯಾಘ್ರ ಸೆರೆಯಾಗಿದ್ದು, ಇನ್ನೆರಡು ಹುಲಿ ಇರುವ ಹಿನ್ನೆಲೆ ಪತ್ತೆ ಕಾರ್ಯ ಮುಂದುವರೆದಿದೆ.

ಇದೀಗ ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ಸಲುವಾಗಿ ನಾಗರಹೊಳೆ ವೈಲ್ಡ್ ಲೈಫ್‌ನ ನಿರ್ದೇಶಕ ಹರ್ಷಕುಮಾರ್ ವಿನೂತನ ಪ್ರಯತ್ನ ನಡೆಸಿದ್ದು ಕಾಫಿ ತೋಟದ ಪ್ರಮುಖ ಸ್ಥಳಗಳಲ್ಲಿ ಮರಳು, ಮಣ್ಣು ಮಿಶ್ರಿತ ‘ಫ್ರೆಜರ್ ಇಂಪ್ರೆಶನ್ ಪ್ಯಾಡ್ಸ್’ (ಪಿಐಪಿ)ಗಳನ್ನು ಅಳವಡಿಸಿದ್ದಾರೆ. ಇದರ ಮೇಲೆ ಹುಲಿಗಳು ಸಂಚಾರ ನಡೆಸಿದಾಗ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯಲು ಈ ವಿನೂತನ ಯೋಜನೆ ಸಹಕಾರಿಯಾಗಬಹುದೆಂಬ ನಿರೀಕ್ಷೆಯೊಂದಿಗೆ

(ಮೊದಲ ಪುಟದಿಂದ) ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಸಹಕಾರದಿಂದ ಹಲವು ಕಡೆಗಳಲ್ಲಿ ಇಂತಹ ಪ್ರಯತ್ನವನ್ನು ೪ನೇ ದಿನದ ಕಾರ್ಯಾಚರಣೆಯಲ್ಲಿ ಪ್ರಯೋಗ ಮಾಡಿದ್ದಾರೆ. ಇದರಿಂದ ಈ ಭಾಗದಲ್ಲಿ ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ಕಾರ್ಯಾಚರಣೆ ತಂಡಕ್ಕೆ ಸಹಕಾರಿಯಾಗಲಿದೆ.

ಮತ್ತಿಗೋಡು ಸಾಕಾನೆ ಶಿಬಿರದಿಂದ ಆಗಮಿಸಿರುವ ಅಭಿಮನ್ಯು ಆನೆಯೊಂದಿಗೆ ಮಾವುತರಾದ ವಸಂತ ಹಾಗೂ ರಾಜ ಅಶ್ವತ್ಥಾಮ ಆನೆಯ ಮಾವುತರಾದ ಶಿವು ಹಾಗೂ ಗಣೇಶ, ಭೀಮ ಆನೆಯ ಮಾವುತರಾದ ಗುಂಡು ಹಾಗೂ ನಂಜುAಡ ಗಣೇಶ ಆನೆಯ ಮಾವುತರಾದ ಜಯ, ರಾಮು ಹಾಗೂ ಮಧು ತಮ್ಮ ಆನೆಗಳೊಂದಿಗೆ ನುರಿತ ಸಿಬ್ಬಂದಿಗಳು, ವೈದ್ಯರು ೪ನೇ ದಿನವಾದ ಬುಧವಾರ ಮುಂಜಾನೆಯಿAದಲೇ ಹುಲಿಯು ಮನುಷ್ಯನನ್ನು ಬೇಟೆಯಾಡಿದ್ದ ಚೂರಿಕಾಡು ವ್ಯಾಪ್ತಿಯ ವಿಸ್ತಾರವಾದ ಕಾಫಿ ತೋಟದ ವಿವಿಧ ಭಾಗದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ನಾಗರಹೊಳೆ ವೈಲ್ಡ್ ಲೈಫ್‌ನ ನಿರ್ದೇಶಕರಾದ ಹರ್ಷಕುಮಾರ್, ಎಸಿಎಫ್ ಗೋಪಾಲ್ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿಯೇ ಮೊಖಂ ಹೂಡಿದ್ದು ಹುಲಿಯ ಕಾರ್ಯಾಚರಣೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಮಡಿಕೇರಿಯ ಸಿಸಿಎಫ್ ಬಿ.ಎನ್.ಎನ್. ಮೂರ್ತಿ ಕಾರ್ಯಾಚರಣೆಯ ಮಾಹಿತಿಯನ್ನು ಆಗಿಂದ್ದಾಗಿಯೇ ಕಲೆ ಹಾಕುತ್ತಿದ್ದು ಕಾರ್ಯಾಚರಣೆಯ ಸ್ಥಳಕ್ಕೆ ಆಗಮಿಸಿ ಇತರ ಅಧಿಕಾರಿಗಳಿಂದ ವರದಿ ಪಡೆಯುತ್ತಿದ್ದಾರೆ.

(ಹೆಚ್.ಕೆ.ಜಗದೀಶ್)