ಪೆರಾಜೆ, ಫೆ. ೧೬: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಇನ್ನರ್ ವೀಲ್ ಕ್ಲಬ್ ಸುಳ್ಯದ ಅಧ್ಯಕ್ಷೆ ನಯನ ಹರಿಪ್ರಸಾದ್ ಮತ್ತು ಸದಸ್ಯೆಯರು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಶೀಥಲೀಕೃತ ಶುದ್ಧ ನೀರಿನ ಘಟಕವನ್ನು ಇನ್ನರ್ ವೀಲ್ ಜಿಲ್ಲಾ ಅಧ್ಯಕ್ಷೆ ಕವಿತಾ ನಿಯತ್ ಅವರು ದೇವಸ್ಥಾನಕ್ಕೆ ಅಧಿಕೃತವಾಗಿ ಹಸ್ತಾಂತರಿಸಿದರು.
ದೇವಸ್ಥಾನದ ವತಿಯಿಂದ ಆಡಳಿತ ಮೊಕ್ತೇಸರರು ಕೊಡುಗೆಯನ್ನು ಸ್ವೀಕರಿಸಿದರು.
ಈ ಸಂದರ್ಭ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ದೇವಸ್ಥಾನದ ಅರ್ಚಕ ವೆಂಕಟ್ರಮಣ ಕೆ. ಪಾಂಙಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.