ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ
ಮಡಿಕೇರಿ: ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ಸಂಪ್ರದಾಯದAತೆ ಮಹಾಶಿವರಾತ್ರಿಯನ್ನು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವೂ ತಾ. ೧೮ ರಂದು ಮಹಾಶಿವರಾತ್ರಿ ಕಾರ್ಯಕ್ರಮ ನಡೆಯಲಿದೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಾ. ೧೮ ರಂದು ಬೆಳಿಗ್ಗೆ ೭ ಗಂಟೆಗೆ ಶತರುದ್ರಾಭಿಷೇಕ, ಬೆಳಿಗ್ಗೆ ೯.೩೦ ಗಂಟೆಗೆ ರುದ್ರಹೋಮ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ೬ ಗಂಟೆಗೆ ತಾಯಂಬಕ ಸೇವೆ, ಸಂಜೆ ೬.೩೦ ಗಂಟೆಯಿAದ ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ. ಸಂಜೆ ೭.೩೦ ಗಂಟೆಗೆ ಲಘು ಉಪಹಾರ. ರಾತ್ರಿ ೧೧ ಗಂಟೆಗೆ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ ಕೊಲ್ಲಂಗಾಲ ಕಾಸರಗೋಡು ಯುವಕ ಯಕ್ಷಗಾನ ಕಲಾರಂಗ ಸುಳ್ಯ ಇವರಿಂದ ಯಕ್ಷಗಾನ ಬಯಲಾಟ ಪ್ರಸಂಗ “ಶ್ರೀ ಕೃಷ್ಣ ಲೀಲಾಮೃತ ಕಂಸವಧೆ ಶಿವ ತಪೋಭಂಗ” ನಡೆಯಲಿದೆ. ತಲಕಾವೇರಿ ಶ್ರೀ ತಲಕಾವೇರಿ ದೇವಾಲಯದಲ್ಲಿ ತಾ. ೧೮ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶತರುದ್ರಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ೭ ಗಂಟೆಗೆ ಏಕಾದಶ ರುದ್ರಾಭಿಷೇಕ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಕಾಧಿಕಾರಿ ತಿಳಿಸಿದ್ದಾರೆ.
ಚೆಟ್ಟಳ್ಳಿ: ಮಹಾಶಿವರಾತ್ರಿ ಉತ್ಸವದ ಅಂಗವಾಗಿ ತಾ. ೧೮ ರಂದು ಚೆಟ್ಟಳ್ಳಿಯಲ್ಲಿ ಮೂರನೇ ವರ್ಷದ ಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚೆಟ್ಟಳ್ಳಿ , ಜನಪರ ಹೋರಾಟ ಸಮಿತಿ, ಶ್ರೀ ವೀರಾಂಜನೇಯ ಯುವಕ ಸಂಘ, ಶ್ರೀ ಗೌರಿ ಗಣೇಶೋತ್ಸವ ಸಮಿತಿ ಚೆಟ್ಟಳ್ಳಿ, ಶ್ರೀ ವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಚೆಟ್ಟಳ್ಳಿ ಅವರ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ ಗಂಟೆಗೆ ಈರಳೆವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಚೇರಿ ಮುಂದಿರುವ ಪಶುಪತಿನಾಥ, ಕಾವೇರಿ ಮಾತೆ, ಶ್ರೀ ಕೃಷ್ಣ, ಗೋಮಾತೆಗೆ ಹಾಗೂ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿರುವ ಶ್ರೀ ವಿನಾಯಕ, ವೀರಾಂಜನೇಯ ಹಾಗೂ ಮಹಾವಿಷ್ಣುವಿನ ಮೂರ್ತಿಗೆ ಸಾಮೂಹಿಕ ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ ೭ ರಿಂದ ಗೋಣಿಕೊಪ್ಪಲಿನ ಯುವ ಗಾಯಕ ಅನ್ವಿತ್ ಕುಮಾರ್ ಹಾಗೂ ದೀಪಿಕಾ ಉಡುಪಿಯವರಿಂದ ಗಾಯನ ಹಾಗೂ ಸುರಕ್ಷಾ ವೈಲಾಯ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೮.೩೦ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಕಂಬಿಬಾಣೆ ಶ್ರೀ ವಿಶ್ವನಾಥ ಕ್ಷೇತ್ರ
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಕಂಬಿಬಾಣೆಯ ಮಾಗ್ಡೂರ್ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಈ ಸಾಲಿನ ಶಿವರಾತ್ರಿ ಮಹೋತ್ಸವ ತಾ. ೧೮ ರ ತನಕ ನಡೆಯಲಿದೆ. ಪೂಜಾ ಕಾರ್ಯವನ್ನು ಕ್ಷೇತ್ರದ ತಂತ್ರಿ ಶಿವಗಿರಿ ಮಠದ ಸನಲ್ ತಂತ್ರಿಗಳ ಹಾಗೂ ಮುಖ್ಯ ಅರ್ಚಕ ಮನೀಷ್ ಅವರ ನೇತೃತ್ವದಲ್ಲಿ ನಡೆಯಲಿದೆ. ತಾ. ೧೮ ರಂದು ಬೆಳಿಗ್ಗೆ ಕನ್ನಿದರ್ಶನ, ೬.೩೦ಕ್ಕೆ ಅಭಿಷೇಕ ಶುದ್ಧಿ ಕ್ರಿಯೆಗಳು ನಡೆಯಲಿದೆ. ೬.೪೫ಕ್ಕೆ ಗುರುಪೂಜೆ, ೭ ಗಂಟೆಗೆ ಮಹಾಗಣಪತಿ ಹವನ, ಸಂಜೆ ೫ ಗಂಟೆಗೆ ಮೆರವಣಿಗೆ, ೭ ಗಂಟೆಗೆ ದೀಪಾರಾಧನೆ, ರಾತ್ರಿ ೯ ಗಂಟೆಗೆ ಮಹಾಪೂಜೆ ನಡೆಯಲಿದೆ. ರಾತ್ರಿ ಹತ್ತು ಗಂಟೆಯಿAದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಅತ್ತೂರು ಶ್ರೀ ಪಂಚಲಿAಗೇಶ್ವರ ದೇವಸ್ಥಾನ
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚ ಲಿಂಗೇಶ್ವರ ದೇವಸ್ಥಾನದಲ್ಲಿ ತಾ. ೧೭ ರಿಂದ ೧೯ ರವರೆಗೆ ವಿವಿಧ ಪೂಜಾ ಕಾರ್ಯಗಳು ನೆರವೇರಲಿದೆ. ತಾ. ೧೭ ರ ಸಾಯಂಕಾಲ ೬.೩೦ ಗಂಟೆಗೆ ತಕ್ಕರ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ತರುವುದು. ೮ ಗಂಟೆಗೆ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ತಾ. ೧೮ ರಂದು ಮುಂಜಾನೆಯಿAದ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಅಲ್ಲದೆ ಎರಡು ದಿನಗಳ ಕಾಲ ವಿವಿಧ ಸೇವಾ ಪೂಜೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ೮೭೬೨೬೨೩೨೮೬, ೯೪೮೩೪೦೫೯೨೩ ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
ಶಾAತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯ
ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ತಾ. ೧೮ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ. ಅಂದು ಬೆಳಗ್ಗಿನಿಂದ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು, ಸಂಜೆ ೪ ಗಂಟೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ೪.೩೦ಕ್ಕೆ ಪುರುಷರು ಹಾಗೂ ಮಹಿಳೆಯರಿಗೆ ಮಡಿಕೆ ಹೊಡೆಯುವ ಸ್ಪರ್ಧೆ ಮತ್ತು ಡ್ರಂಗೆ ಚೆಂಡು ಹಾಕುವ ಸ್ಪರ್ಧೆಗಳು ನಡೆಯಲಿವೆ. ಸಂಜೆ ಹಾಗೂ ರಾತ್ರಿ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ಮಾಹಿತಿ ನೀಡಿದ್ದಾರೆ.
ತೊರೆನೂರು ಶನೇಶ್ವರ ದೇವಾಲಯ