ಮಡಿಕೇರಿ, ಫೆ. ೧೬: ಮಡಿಕೇರಿ-ಬಂಟ್ವಾಳ ರಾಷ್ಟಿçÃಯ ಹೆದ್ದಾರಿಯಲ್ಲಿ ಸಾಗಿದರೆ ಮಡಿಕೇರಿ ನಗರಸಭಾ ಪರಿಮಿತಿಯನ್ನು ಕ್ರಮಿಸಿದೊಡನೇ ಕಾಣಸಿಗುವದು ಕಾಟಕೇರಿ ಎಂಬ ಗ್ರಾಮ., ನಗರ ವ್ಯಾಪ್ತಿಯಿಂದ ಕೇವಲ ೮ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಕಾಟಚಾರಕ್ಕೂ ಕೂಡ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿಲ್ಲ., ಕಳೆದ ೨೦ ವರ್ಷಗಳಿಂದ ಸೌಲಭ್ಯಕ್ಕಾಗಿ ಇಲ್ಲಿನ ಜನರು ಕಾಯುತ್ತಿದ್ದು, ೨೦ ವರ್ಷಗಳ ಹಿಂದೆ ರಸ್ತೆಗೆಂದು ಹಾಕಲಾಗಿರುವ ಕಲ್ಲುಗಳು ಮೇಲೆದ್ದು ರಸ್ತೆ ಹೊಂಡಾ ಗುಂಡಿಯಾಗಿದ್ದರೂ ಇನ್ನೂ ಕೂಡ ಡಾಮರು ಭಾಗ್ಯ ಕಂಡಿಲ್ಲ., ವಿಚಿತ್ರವೆಂದರೆ ಕಳೆದ ಒಂದು ವರ್ಷದಿಂದ ಗ್ರಾಮ ಸಭೆಯೇ ನಡೆದಿಲ್ಲ..!

ರಾಷ್ಟಿçÃಯ ಹೆದ್ದಾರಿಯಲ್ಲಿ., ಮಡಿಕೇರಿಯಿಂದ ಅನತಿ ದೂರದಲ್ಲೇ ಮೊದಲಿಗೆ ಸಿಗುವದು ಮದೆ ಗ್ರಾಮ ಪಂಚಾಯ್ತಿ. ಈ ಪಂಚಾಯ್ತಿ ವ್ಯಾಪ್ತಿಗೊಳಪಡುವದು ಕಾಟಕೇರಿ ಗ್ರಾಮ. ಸುಮಾರು ೭೦೦ಕ್ಕೂ ಅಧಿಕ ಮತದಾರರನ್ನು ಹೊಂದಿರುವ ಗ್ರಾಮ ಕೂರನ ಬಾಣೆ ಸೇರಿದಂತೆ ಎರಡನೇ ಮೊಣ್ಣಂಗೇರಿವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಆದರೆ., ಇಂದಿಗೂ ಇಲ್ಲಿನ ಜನತೆ ರಸ್ತೆ, ಚರಂಡಿ, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ದಿನನಿತ್ಯ ಪಂಚಾಯ್ತಿ ಕಚೇರಿಗೆ ಜನಪ್ರತಿನಿಧಿಗಳ ಮನೆ ಬಾಗಿಲುಗಳಿಗೆ ಎಡತಾಕುತ್ತಿರುವದು ಸಾಮಾನ್ಯವಾಗಿದೆ.

ರಸ್ತೆಗಳೇ ಇಲ್ಲ.!

ಪ್ರಮುಖವಾಗಿ ಈ ಗ್ರಾಮದ ಜನತೆಯನ್ನ ಕಾಡುತ್ತಿರುವದು (ಮೊದಲ ಪುಟದಿಂದ) ಇಲ್ಲಿನ ರಸ್ತೆಗಳು ಬೇಸಿಗೆ ಕಾಲದಲ್ಲಿ ಧೂಳೆಬ್ಬಿಸುತ್ತಿದ್ದರೆ ಮಳೆಗಾಲದಲ್ಲಿ ಕೆಸರಿನ ಹೊಂಡಗಳಾಗಿ ಮಾರ್ಪಡುತ್ತವೆ. ವಾಹನಗಳು ಹೋಗಲಿ ಮನುಷ್ಯರು ನಡೆದಾಡುವದು ಕೂಡ ಅಸಾಧ್ಯ. ಇಂತಹ ರಸ್ತೆಗಳಿಗೆ ಪ್ರತಿವರ್ಷ ಗ್ರಾಮಸ್ಥರೇ ಸೇರಿಕೊಂಡು ಕಲ್ಲು-ಮಣ್ಣುಗಳನ್ನು ತುಂಬಿ ದುರಸ್ತಿಪಡಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಚರಂಡಿಗಳೇ ಇಲ್ಲ..!

ಈ ಗ್ರಾಮದಲ್ಲಿ ಎಂದೋ ನಿರ್ಮಾಣವಾಗಿರುವ ರಸ್ತೆಗಳಿವೆ ಯಾದರೂ ಸಮರ್ಪಕವಾದ ಚರಂಡಿ ವ್ಯವಸ್ಥೆಗಳಿಲ್ಲ. ವರ್ಷದಿಂದ ವರ್ಷಕ್ಕೆ ರಸ್ತೆ ಕುಗ್ಗುತ್ತಿರುವದರಿಂದ ಚರಂಡಿ ರಸ್ತೆಗಿಂತ ಮೇಲೆ ಇದ್ದು, ಮಳೆಗಾಲದಲ್ಲಿ ನೀರೆಲ್ಲ ರಸ್ತೆ ಮೇಲೆ ಹರಿದು ರಸ್ತೆ ಕೆರೆಯಂತಾಗುತ್ತದೆ. ಕಳೆದ ಮಳೆಗಾಲದಲ್ಲಿ ರಸ್ತೆ ಬದಿ ಮಣ್ಣು ಕುಸಿದು ಚರಂಡಿ ಮುಚ್ಚಿ ಹೋಗಿರುವದಲ್ಲದೆ, ರಸ್ತೆ ಸಂಪರ್ಕವೂ ಕಡಿತಗೊಂಡಿತ್ತು. ಗ್ರಾ. ಪಂ. ಗಮನಕ್ಕೆ ತಂದರೂ ಕೂಡ ಯಾರೂ ಗಮನ ಹರಿಸದ ಹಿನ್ನೆಲೆಯಲ್ಲಿ ಕೊನೆಗೆ ಗ್ರಾಮಸ್ಥರೇ ಸೇರಿಕೊಂಡು ಮಣ್ಣು ತೆರವುಗೋಳಿದರು. ಆದರೂ ಒಂದು ಬದಿಯಲ್ಲಿ ಕುಸಿದಿರುವ ಮಣ್ಣಿನೊಂದಿಗೆ ಮರದ ದಿಮ್ಮಿಯೊಂದಿದ್ದು, ಮತ್ತೊಂದು ಬದಿಯಲ್ಲಿ ವಿದ್ಯುತ್ ಕಂಬವಿದೆ. ಮಳೆಬಂದು ವಾಹನ ಜಾರಿದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ..! ಚರಂಡಿ ದುರಸ್ತಿ ಹೋಗಲೀ ಬದಿಯಲ್ಲಿರುವ ಕಾಡು ಕಡಿಯುವತ್ತಲೂ ಗಮನ ಹರಿಸುತ್ತಿಲ್ಲವೆಂಬುದು ಗ್ರಾಮಸ್ಥರ ಅಂಬೋಣ.

ಸAಪರ್ಕ ಕಡಿತ..!

ಇಲ್ಲಿನ ರಸ್ತೆಯು ಎರಡನೇ ಮೊಣ್ಣಂಗೇರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಅತ್ತ ಗಾಳಿಬೀಡು ಗ್ರಾ.ಪಂ.ಗೆ ಒಳಪಡುವ ಮೊಣ್ಣಂಗೇರಿ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಚರಂಡಿಗಳ ನಿರ್ವಹಣೆ, ಇತರ ಸೌಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ, ಕಾಟಕೇರಿಯಲ್ಲಿ ಮಾತ್ರ ಯಾವದೂ ಆಗುತ್ತಿಲ್ಲವೆಂದು ಸ್ಥಳೀಯರು ಹೇಳುತ್ತಾರೆ. ಮಳೆಗಾಲದಲ್ಲಿ ಎರಡನೇ ಮೊಣ್ಣಂಗೇರಿಯ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡರೆ ಇಲ್ಲಿನ ರಸ್ತೆ ಮೂಲಕವೇ ಮಡಿಕೇರಿ, ಎತ್ತ ಕಡೆಗೂ ಸಂಪರ್ಕವಿಲ್ಲದೆ ಎರಡೂ ಗ್ರಾಮಗಳು ದ್ವೀಪವಾಗಿ ಮಾರ್ಪಡುತ್ತವೆ ಎಂದು ಗ್ರಾಮಸ್ಥರು ತಮ್ಮ ಸಂಕಷ್ಟವನ್ನು ವಿವರಿಸುತ್ತಾರೆ.

ವಿದ್ಯುತ್ ಬೆಳಕಿಲ್ಲ..!

ವಿದ್ಯುತ್ ಸಂಪರ್ಕ ಇಲ್ಲದಿದ್ದ ಈ ಗ್ರಾಮಕ್ಕೆ ಹೋರಾಟದ ಫಲವಾಗಿ ವಿದ್ಯುತ್ ಬಂದಿದೆ. ಗ್ರಾಮದಲ್ಲಿ ಹಾದು ಹೋಗಿರುವ ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಮನೆಗಳಿದ್ದು, ದೇವಾಲಯ ಕೂಡ ಇದೆ. ಆದರೆ ವಿದ್ಯುತ್ ದೀಪವಾಗಲೀ, ಸೋಲಾರ್ ಬೆಳಕಿನ ವ್ಯವಸ್ಥೆಯಾಗಲೀ ಇಲ್ಲ. ದೇವಾಲಯದ ಆವರಣದಲ್ಲಿ ಅಳವಡಿಸಲಾದ ಸೋಲಾರ್ ದೀಪ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ. ರಸ್ತೆ ಬದಿಯುದ್ದಕ್ಕೂ ದೇವರ ಕಾಡು ಇರುವದರಿಂದ ಕತ್ತಲಾವರಿಸಿರುತ್ತದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವದರಿಂದ ಕತ್ತಲಾದ ಮೇಲೆ ಯಾರೂ ಸಂಚರಿಸುವAತಿಲ್ಲ. ಅಲ್ಲದೆ, ಉದ್ದಕ್ಕೂ ೧೧ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ಹಾದು ಹೋಗಿದ್ದು, ಮರದ ರೆಂಬೆಗಳು ಬಿದ್ದು ವಿದ್ಯುತ್ ಸ್ಪರ್ಶ ಉಂಟಾಗಿ ಮನೆಗಳಲ್ಲಿ ಉಪಕರಣಗಳು ಸುಟ್ಟು ಹೋಗಿರುವ ಪ್ರಕರಣಗಳೂ ನಡೆದಿವೆ.

೨೦ ವರ್ಷಗಳ ಹಿಂದಿನ ಕಾಮಗಾರಿ..!

ಈ ಗ್ರಾಮ ವ್ಯಾಪ್ತಿಯಲ್ಲಿ ೨೦ ವರ್ಷಗಳ ಹಿಂದೆ ಒಂದಿಷ್ಟು ಅಭಿವೃದ್ಧಿ ಕಾಮಗಾರಿಗಳಾಗಿದ್ದು, ನಂತರದಲ್ಲಿ ಕಡೆಗಣಿಸಲ್ಪಟ್ಟಿರುವದಾಗಿ ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದ ದೇವಾಲಯದ ಬಳಿ ಸೇರಿದ್ದ ಗ್ರಾಮಸ್ಥರುಗಳಾದ ಪೈಕೆ ಗೋಪಾಲ, ತಮ್ಮಯ್ಯ, ಜೀವನ್, ಹೊನ್ನಪ್ಪ, ಪುನಿತ್, ದೇವಿಪ್ರಸಾದ್, ಜಯಲಕ್ಷಿö್ಮ, ರೇಖಾ, ಶಿವರಂಜನ್, ವಿಜಯಲಕ್ಷಿö್ಮ, ಕವನ, ಚಿಮ್ಮಂಡ ಜೀವನ್, ಚಿಣ್ಣಪ್ಪ, ಮೆಂತಡ್ಕ ತಮ್ಮಯ್ಯ, ವೆಂಕಪ್ಪ, ಲೋಕೇಶ್, ಭುವನೇಶ್, ಸುಬ್ಬಯ್ಯ, ರೊಹನ್, ಗಗನ್, ರಾಧಾ ವೇಣು, ದೇಚುಕುಮಾರಿ, ಯಶೋಧ, ಭವಾನಿ, ಅಚ್ಚಲ್ಪಾಡಿ ಹರೀಶ್, ಲೀಲಾವತಿ, ಕಾಸ್ಪಾಡಿ ಯೋಗೇಶ್, ಅಪ್ಪಯ್ಯ, ಹರೀಶ್ ಇನ್ನಿತರರು ಈ ಹಿಂದೆ ಅಬುಶಾಲಿ ಎಂಬವರು ಗ್ರಾ.ಪಂ.ಸದಸ್ಯರಾಗಿದ್ದಾಗ ಒಂದಿಷ್ಟು ಕೆಲಸಗಳಾಗಿದ್ದವು. ಅಂದು ರಸ್ತೆ ಡಾಂಬರೀಕರಣಕ್ಕೆAದು ಹಾಕಿರುವ ಜಲ್ಲಿಕಲ್ಲುಗಳೇ ಇಂದಿಗೂ ಕಾಣುತ್ತಿದ್ದು, ಇದುವರೆಗೆ ಡಾಮರು ಕಾಣದೆ ಕಲ್ಲುಗಳು ಎದ್ದು ಹೋಗಿವೆ. ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಆಟೋರಿಕ್ಷಾ ಸೇರಿದಂತೆ ಬಾಡಿಗೆ ವಾಹನಗಳು ಬರುತ್ತಿಲ್ಲ, ಸಮಸ್ಯೆ ಬಗ್ಗೆ ಪಂಚಾಯಿತಿಗೆ, ಸದಸ್ಯರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೇಳಿದರೆ ಅನುದಾನವಿಲ್ಲ ಎಂಬ ಉತ್ತರ ನೀಡುತ್ತಾರೆ ಎಂದು ಅಳಲು ತೋಡಿಕೊಂಡರು.

ಇನ್ನೀಗ ಚುನಾವಣೆ ಹಾಗೂ ಮಳೆಗಾಲ ಎದುರಾಗಲಿದ್ದು, ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

? ಕುಡೆಕಲ್ ಸಂತೋಷ್