ಸಿದ್ದಾಪುರ, ಫೆ. ೧೪: ಬಾಡಗ-ಬಾಣಂಗಾಲ ಗ್ರಾಮದ ಮೈಲಾಪುರದ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ತಾ. ೧೮ ರಂದು ಮಹಾ ಶಿವರಾತ್ರಿ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ.
ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೧೦ ರಿಂದ ೧೧ ಗಂಟೆಯವರೆಗೆ ಗಂಗಾಪೂಜೆ ಹಾಗೂ ೧೧ ರಿಂದ ಅಪರಾಹ್ನ ೨ ಗಂಟೆಯವರೆಗೆ ಮುತ್ತೂರಿನ ವೆಂಕಟಯ್ಯ ಚೆಲುವಯ್ಯ ಹಾಗೂ ತಂಡದ ಕೊಂಬು, ನಗಾರಿ, ತಮಟೆ ಮತ್ತು ಕೊಡಗಿನ ವಾದ್ಯಗೋಷ್ಠಿ ನಡೆಯಲಿದೆ. ಶಂಕರ ಮತ್ತು ತಂಡದವರಿAದ ನಾದಸ್ವರ, ಹುಣಸೂರಿನ ಆರ್. ಎಕ್ಸ್ಬಾಸ್ಸ್ ಅವರಿಂದ ಡೊಳ್ಳು ನಗಾರಿ ಕುಣಿತ ನಂತರ ಶ್ರೀ ಸಿದ್ಧಪ್ಪಾಜಿ ಮತ್ತು ದೊಡ್ಡಮ್ಮ ತಾಯಿ ಮೆರವಣಿಗೆ ಹೊರಟು ಪೂಜೆಯೊಂದಿಗೆ ದೇವಾಲಯಕ್ಕೆ ತೆರಳುವುದು. ಬಳಿಕ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆೆ. ಶಾಸಕರಾದ ಕೆ.ಜಿ. ಬೋಪಯ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ೮.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೯.೩೦ಕ್ಕೆ ಪೊನ್ನಂಪೇಟೆಯ ಕಾವೇರಿ ಮೆಲೋಡಿಸ್ ಆರ್ಕೆಸ್ಟಾç ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಪ್ರಮುಖರಾದ ಬಾಲಪೂಜಾರಿ ಹಾಗೂ ಗಣೇಶ್ ತಿಳಿಸಿದ್ದಾರೆ.