ಮಡಿಕೇರಿ, ಫೆ. ೧೪ : ಕೊಡಗು ಜಿಲ್ಲೆ ಪುಟ್ಟದಾದರೂ ಪ್ರವಾಸಿ ಭೂಪಟದಲ್ಲಿ ದೊಡ್ಡದಾಗಿ ಗುರುತಿಸಿಕೊಂಡಿರುವ ಜಿಲ್ಲೆ., ಪ್ರವಾಸಿ ತಾಣಗಳಿಂದಾಗಿ ವಿಶ್ವ ಮಟ್ಟದಲ್ಲೇ ತನ್ನ ಚಾಪು ಮೂಡಿಸಿದೆ.., ಅದರಲ್ಲೂ ಜಿಲ್ಲಾ ಕೇಂದ್ರವಾದ ಮಂಜಿನ ನಗರಿ ಮಡಿಕೇರಿಯಂತೂ ಹೆಸರುವಾಸಿ., ಹರಿದ್ವರ್ಣದಿಂದ ಕಂಗೊಳಿಸುವ ಸುತ್ತ ಮುತ್ತಲಿನ ಪ್ರದೇಶದ ಸುಂದರ ತಾಣಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.., ಈ ಸುಂದರ ತಾಣಗಳ ಸಾಲಿನಲ್ಲಿ ಕಂಗೊಳಿಸುವದು ಮಾಂದಲ್ಪಟ್ಟಿ ಎಂದು ಕರೆಯಲಾಗುವ ‘ಮಂದ್ಲ್ಪಟ್ಟಿ’ ಎಂಬ ಬೆಟ್ಟದ ಸಾಲುಗಳು., ಮಳೆಗಾಲವೂ ಸೇರಿದಂತೆ ಇಲ್ಲಿಗೆ ದಿನನಿತ್ಯ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಈ ಬೆಟ್ಟವನ್ನು ಕ್ರಮಿಸಲು ತೆರಳುವ ಮಾರ್ಗದುದ್ದಕ್ಕೂ ಜನರು ನೆಲೆಸಿದ್ದಾರೆ.., ಆದರೆ., ತೆರಳಲು ಇರುವ ಮಾರ್ಗ ಮಾತ್ರ ಇಲ್ಲವಾಗಿದೆ.., ಸ್ವರ್ಗದ ಮಡಿಲಿನಲ್ಲಿರುವ ಈ ಪ್ರದೇಶದ ಜನತೆಗೆ ಕಿತ್ತೋದ ರಸ್ತೆಯಲ್ಲಿ ಸಂಚರಿಸುವದೇ ನರಕ ಸದೃಶವಾಗಿದೆ..!
ಮಡಿಕೇರಿಯಿಂದ ಅಂದಾಜು ೧೮ ಕಿ.ಮೀ. ದೂರದಲ್ಲಿರುವ ಮಾಂದಲ್ಪಟ್ಟಿಗೆ ತೆರಳುವ ರಸ್ತೆಯುದ್ದಕ್ಕೂ ಅಬ್ಬಿಫಾಲ್ಸ್ ಜಂಕ್ಷನ್, ಹೆಬ್ಬೆಟ್ಟಗೇರಿ, ದೇವಸ್ತೂರು, ನಿಡುವಟ್ಟು, ಬಾರಿಬೆಳ್ಳಚ್ಚು ಗ್ರಾಮಗಳು ಒಳಪಡುತ್ತವೆ. ಇದೇ ಮಾರ್ಗದಿಂದ ಕಾಲೂರು ಹಾಗೂ ಸೂರ್ಲಬ್ಬಿ ಕಡೆಗೂ ಸಂಪರ್ಕ ರಸ್ತೆಗಳಿವೆ. ಕೆ.ನಿಡುಗಣೆ ಹಾಗೂ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ಈ ಪ್ರದೇಶÀದಲ್ಲಿ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಹದಗೆಟ್ಟು ಹೋಗಿದ್ದು, ಸಮಚಾರಕ್ಕೆ ಅಯೋಗ್ಯವಾಗಿದೆ.
(ಮೊದಲ ಪುಟದಿಂದ)
ನಿರ್ವಹಣೆ ಇಲ್ಲದೆ ಹಾಳು
ಲೋಕೋಪಯೋಗಿ ಇಲಾಖೆ ವತಿಯಿಂದ ಈ ರಸ್ತೆಯನ್ನು ಕಳೆದ ಐದು ವರ್ಷದ ಹಿಂದೆ ನಿರ್ಮಿಸಲಾಗಿದ್ದು, ಇದೀಗ ಹೊಂಡದಲ್ಲಿ ರಸ್ತೆಯನ್ನು ಹುಡುಕುವಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟು ಹೋಗಿದೆ. ಅಬ್ಬಿ ಫಾಲ್ಸ್ ಜಂಕ್ಷನ್ನಿAದ ಒಂದಿಷ್ಟು ಮುಂದೆ ಸಾಗಿದರೆ ಸಾಕು ನರಕಕ್ಕೆ ಹೋದಂತೆ ಭಾಸವಾಗುತ್ತದೆ. ಕಾರು, ಜೀಪು ಸೇರಿದಂತೆ ಲಘು ವಾಹನಗಳು ಸರ್ಕಸ್ ಮಾಡುತ್ತಲೇ ತೆರಳಬೇಕು. ಆಟೋರಿಕ್ಷಾ, ದ್ವಿಚಕ್ರ ವಾಹನಗಳು ಒಂದಿಷ್ಟು ಎಚ್ಚರ ತಪ್ಪಿದರೂ ಉರುಳಿ ಬೀಳುವದಂತೂ ದಿಟ..!
ಶಾಲಾ ಮಕ್ಕಳ ಪಾಡು..!
ಈ ಪ್ರದೇಶದಲ್ಲಿ ಕಚೇರಿ ಕೆಲಸಗಳಿಗೆ, ಶಾಲೆಗಳಿಗೆ ತೆರಳುವವರು ಬಹಳಷ್ಟಿದ್ದಾರೆ. ಹಾಗಾಗಿ ಮಡಿಕೇರಿಯಿಂದ ಮಾಂದಲ್ಪಟ್ಟಿವರೆಗೆ ಒಂದು ಸರಕಾರಿ ಬಸ್ ಬೆಳಿಗ್ಗೆ, ಸಂಜೆ ಸಂಚರಿಸುತ್ತದೆ. ಇದೀಗ ರಸ್ತೆಯ ಸ್ಥಿತಿ ನೋಡಿ ಬಸ್ ಕೂಡ ತನಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲವೆಂದು ನಿಂತು ಬಿಟ್ಟಿತ್ತು. ಮಕ್ಕಳ ಕಷ್ಟ ನೋಡಿ ಸಾರ್ವಜನಿಕರೇ ಬಾವಿಯಂತಿದ್ದ ಗುಂಡಿಗಳಿಗೆ ಮಣ್ಣು ತುಂಬಿದ್ದರಿAದ ಮತ್ತೆ ಸಂಚಾರ ಆರಂಭಗೊAಡಿದೆ. ಆದರೆ., ಬಾರಿಬೆಳ್ಳಚ್ಚುವರೆಗೆ ಮಾತ್ರ ತೆರಳುತ್ತಿದ್ದು, ಅಲ್ಲಿಂದ ವಾಪಸ್ಸಾಗುತ್ತಿದೆ. ಇದರಿಂದಾಗಿ ಶಾಲಾ ಮಕ್ಕಳು ಎರಡು ಕಿ.ಮೀನಷ್ಟು ದೂರ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಖಾಸಗಿ ಶಾಲೆಯ ಬಸ್ ಕೂಡ ಈ ಮಾರ್ಗದಲ್ಲಿ ಬರುತ್ತಿತ್ತು. ಆದರೆ, ಇದೀಗ ಆ ಬಸ್ ಇತ್ತ ತಿರುಗಿಯೂ ನೋಡುತ್ತಿಲ್ಲ..!
ಅಪಾಯ ಕಾದಿದೆ..!
ಈ ರಸ್ತೆಯಲ್ಲಿ ಪ್ರತಿನಿತ್ಯ ಪ್ರವಾಸಿಗರು ತೆರಳುತ್ತಾರೆ. ಆದರೆ ರಸ್ತೆ ಸರಿ ಇಲ್ಲದ ಕಾರಣ ಇತರ ವಾಹನಗಳಿಗೆ ಸಂಚಾರ ಸಾಧ್ಯವಿಲ್ಲದೆ ಅವರುಗಳನ್ನು ಬಾಡಿಗೆ ಜೀಪಿನವರು ಕರೆದೊಯ್ಯುತ್ತಾರೆ. ಕೆಲವೊಂದು ತೆರೆದ ಜೀಪುಗಳು ವೇಗವಾಗಿ ಸಂಚರಿಸುವಾಗ ಒಮ್ಮೊಮ್ಮೆ ಜೀಪುಗಳು ಮಗುಚಿದಂತಾಗುತ್ತುದೆ. ಇತರ ವಾಹನಗಳಿಗೆ ದಾರಿ ಬಿಟ್ಟುಕೊಡುವಾಗ ಕೂಡ ಅವಘಡಗಳಾಗುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯುವಂತಿಲ್ಲ..!
? ಕುಡೆಕಲ್ ಸಂತೋಷ್