ಗುಡ್ಡೆಹೊಸೂರು, ಫೆ. ೧೪: ಇಲ್ಲಿನ ಹಿತರಕ್ಷಣಾ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ೨ ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ಅಂರ‍್ರಾಷ್ಟಿçÃಯ ಸೆಷ್ಟೋಬಾಲ್ ಕ್ರೀಡಾಪಟು ನಂದಿನಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ನಂತರ ಪಂದ್ಯಾಟ ಆರಂಭಿಸಲಾಗಿತ್ತು. ಮುಖ್ಯವಾಗಿ ವಾಲಿಬಾಲ್, ಥ್ರೋಬಾಲ್ ಮತ್ತು ಮಹಿಳೆಯರ ಹಗ್ಗಜಗ್ಗಾಟ ಪುರುಷರ ಹಗ್ಗಜಗ್ಗಾಟ ನಡೆಯಿತು. ಪಂದ್ಯಾಟ ತಡರಾತ್ರಿ ತನಕ ಹೊನಲು ಬೆಳಕಿನಲ್ಲಿ ನಡೆಯಿತು.

ಬಹುಮಾನ ವಿತರಣೆ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಕಾಂಗ್ರೆಸ್ ಮುಖಂಡ ಮಂಥರ್ ಗೌಡ, ಸ್ಥಳೀಯ ಉದ್ಗಮ್ ಶಾಲೆಯ ಮುಖ್ಯಸ್ಥ ಬೋಪಣ್ಣ ಹಾಜರಿದ್ದರು. ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಶಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ನಂದಿನಿ ಮತ್ತು ಸದಸ್ಯರು ಹಾಜರಿದ್ದರು.

ಈ ಸಂದರ್ಭ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಬಿ.ಎಂ. ಪ್ರದೀಪ್, ಕಾರ್ಯದರ್ಶಿ ಅಭಿಷೇಕ್, ಅರುಣ್, ರವಿ ಅಲ್ಲದೆ ಎಲ್ಲಾ ಸದಸ್ಯರು ಭಾಗವಹಿಸಿ, ಕ್ರೀಡಾಕೂಟ ಯಶಸ್ವಿಗೊಳಿಸಿದರು. ವಾಲಿಬಾಲ್ ಕ್ರೀಡೆಯಲ್ಲಿ ಬಿಲಾಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ವಾಸು ತಂಡ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್ ಮಹಿಳೆಯರ ಪಂದ್ಯದಲ್ಲಿ ಮರಗೋಡು ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಗುಡ್ಡೆಹೊಸೂರಿನ ಹೊಟೇಲ್ ಸವಿರುಚಿ ತಂಡ ಪಡೆಯಿತು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಹಿಳೆಯರ ಮತ್ತು ಪುರುಷರ ಎರಡು ವಿಭಾಗದಲ್ಲಿ ಗುಡ್ಡೆಹೊಸೂರಿನ ಗೌಡ ಸಮಾಜದ ತಂಡಗಳು ಪ್ರಥಮ ಸ್ಥಾನ ಪಡೆದವು. ಈ ಕ್ರೀಡಾಕೂಟದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ಮತ್ತು ಉದ್ಯಮಿ ಸಚಿನ್ ಮುಂತಾದವರು ಭಾಗವಹಿಸಿದ್ದರು. ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರಿಂದ ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಅಪ್ಪಚ್ಚು ರಂಜನ್ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.