ಚೆಟ್ಟಳ್ಳಿ, ಫೆ. ೧೪: ಅಕಾಲಿಕ ಮಳೆ, ಕಾರ್ಮಿಕರ ಕೊರತೆಯಲ್ಲಿ ಕಾಫಿ ಕುಯ್ಯಲಾಗದೇ ಬೆಳೆಗಾರರು ಪರದಾಡುತ್ತಿರುವ ಸನ್ನಿವೇಶದಲ್ಲಿ ಜರ್ಮನಿಯ ನಾಗರಿಕರು ಚೆಟ್ಟಳ್ಳಿ ಕಾಫಿ ತೋಟವೊಂದರಲ್ಲಿ ಕಾಫಿ ಕುಯ್ಲು ಮಾಡುತ್ತಿದ್ದ ದೃಶ್ಯ ಕಂಡುಬAತು.

ಜರ್ಮನಿ ರಾಷ್ಟçದಿಂದ ಮೈಸೂರಿಗೆ ಆಗಮಿಸಿದ್ದ ಕಾಯ, ಜೋಹಾನಿ, ಲಿನ್ಯೂಸ್, ಲೂಹಿಸ್, ಜಾಶ್ಮಿನ್ ಎಂಬವರು ಕೊಡಗಿನ ಕಾಫಿ ಕುಯ್ಲಿನ ಅನುಭವ ಪಡೆಯಲು ಕೊಡಗಿಗೆ ಬಂದಿದ್ದರು. ಚೆಟ್ಟಳ್ಳಿಯ ಮುಳ್ಳಂಡ ಅಂಜನ್ ಮುತ್ತಪ್ಪ ಅವರನ್ನು ಸಂಪರ್ಕಿಸಿ ಚೆಟ್ಟಳ್ಳಿಯ ಕಾಫಿ ತೋಟದಲ್ಲೆಲ್ಲ ಸುತ್ತಾಡಿದ ಇವರು ಅಂಜನ್ ಅವರಿಂದ ಕಾಫಿ ವೈಶಿಷ್ಟö್ಯದ ಬಗ್ಗೆ ಮಾಹಿತಿ ಪಡೆದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕಾಫಿ ಕೊಯ್ಲು ಮಾಡಿ ಸಂಭ್ರಮಿಸಿದರು.

ಕೊಡಗಿನ ಹಸಿರು ಪರಿಸರದಲ್ಲಿನ ಕಾಫಿಯನ್ನು ಕೊಯ್ಲು ಮಾಡಿದ್ದು ನಮಗೆ ಹೊಸ ಅನುಭವವನ್ನು ನೀಡಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊAಡರು. - ಕರುಣ್ ಕಾಳಯ್ಯ