ಸೋಮವಾರಪೇಟೆ, ಫೆ. ೧೫: ಪಟ್ಟಣದ ವಕೀಲರು ಹಾಗೂ ನೋಟರಿಯಾಗಿರುವ ಪವನ್ ಸಾಗರ್ ಅವರು ಅಟ್ಟಾವರ ಸರ್ಕಾರಿ ಪ್ರೌಢಶಾಲೆಗೆ ರೂ. ೩೩ ಸಾವಿರ ಮೌಲ್ಯದ ಕಂಪ್ಯೂಟರ್ ಹಾಗೂ ಸ್ಪೀಕರ್ಗಳನ್ನು ಕೊಡುಗೆಯಾಗಿ ನೀಡಿದರು.
ಕಳೆದ ೫ ವರ್ಷಗಳಿಂದಲೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆಯುತ್ತಿರುವ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್ ನೀಡಲಾಗಿದೆ ಎಂದು ಪವನ್ ಸಾಗರ್ ತಿಳಿಸಿದರು. ಪತ್ರಿಕಾಭವನದಲ್ಲಿ ಶಾಲೆಯ ಶಿಕ್ಷಕ ಪ್ರಕಾಶ್ ಅವರಿಗೆ ಕಂಪ್ಯೂಟರನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಹಿರಿಯ ವಕೀಲ ಈಶ್ವರಚಂದ್ರ ಸಾಗರ್ ಉಪಸ್ಥಿತರಿದ್ದರು.