ಮಡಿಕೇರಿ, ಫೆ. ೧೪: ಮಡಿಕೇರಿ ತಾಲೂಕು ಕಡಗದಾಳು ಗ್ರಾಮದಲ್ಲಿರುವ ಪ್ರಕೃತಿದತ್ತ ದೇವಾಲಯವಾದ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ವಾರ್ಷಿಕ ಮಹಾ ಪೂಜೆಯು ತಾ. ೧೮ ಮತ್ತು ತಾ. ೧೯ ರಂದು ನಡೆಯಲಿದೆ.

ತಾ. ೧೮ ರಾತ್ರಿ ಜಾಗರಣೆ ಹಾಗೂ ಬಿಲ್ವಪತ್ರೆ ಅರ್ಚನೆ, ಎಳೆನೀರು ಅಭಿಷೇಕ ಮಹಾಪೂಜೆ ಸೇರಿದಂತೆ ಹಲವು ಪೂಜಾ ಕೈಂಕರ್ಯ ನಡೆಯಲಿದೆ. ತಾ. ೧೯ ಬೆಳಿಗ್ಗೆ ೧೦ ಗಂಟೆಯಿAದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊAಡು ಮಧ್ಯಾಹ್ನ ಮಹಾಪೂಜೆ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಊರಿನವರ ಮತ್ತು ಸರ್ವ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಅನ್ನದಾನ ನಡೆಯಲಿದೆ.