ಮಡಿಕೇರಿ, ಫೆ. ೧೪: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಟಿ. ಜಾನ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಹಿರಿಯ ಕಾಂಗ್ರೆಸ್ಸಿಗ ಟಿ. ಜಾನ್ ಅವರ ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬೇಕಲ್ ರಮಾನಾಥ್, ರಾಜೇಶ್ ಯಲ್ಲಪ್ಪ, ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ, ಇಸ್ಮಾಯಿಲ್, ಟಿ.ಹೆಚ್. ಉದಯ್ ಕುಮಾರ್, ಚಂದ್ರಶೇಖರ್ ಆರ್.ಪಿ., ಕೊಲ್ಯದ ಗಿರೀಶ್, ನೆರವಂಡ ಉಮೇಶ್, ಟಿ.ಎಂ. ಅಯ್ಯಪ್ಪ, ವಿ.ಪಿ. ಸುರೇಶ್, ಫ್ಯಾನ್ಸಿ ಪಾರ್ವತಿ, ಪುಷ್ಪ ಪೂಣಚ್ಚ, ಕಾರ್ಯಕರ್ತರು ಸಂತಾಪ ಸೂಚಿಸಿದರು.