ಮಡಿಕೇರಿ, ಫೆ. ೧೨: ರಾಷ್ಟಿçÃಯ ಶಿಶು ಕಲ್ಯಾಣ ಸಂಸ್ಥೆಯ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಇನ್ನರ್ವೀಲ್, ರೋಟರಿ ಮಿಸ್ಟಿಹಿಲ್ಸ್, ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟಿçÃಯ ವರ್ಣಚಿತ್ರ ಸ್ಪರ್ಧೆ’ಯನ್ನು ಈ ಹಿಂದೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ಹೆಸರನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಈ ಕೆಳಗಿನವರು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿದ್ದು, ಬಹುಮಾನವನ್ನು ಪಡೆದಿರುತ್ತಾರೆ.
ಹಸಿರು ಗುಂಪು: ಮಡಿಕೇರಿಯ ಸಂತ ಜೋಸೆಫರ ಶಾಲೆ (ಆಂಗ್ಲ ಮಾಧ್ಯಮ)ದ ಅನಘ ಬಿ.ಎಸ್. ಪ್ರಥಮ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅದಿತಿ ಕಾವೇರಮ್ಮ ಕೆ.ಎ. ದ್ವಿತೀಯ, ಎಎಲ್ಜಿ ಕ್ರೆಸೆಂಟ್ ಶಾಲೆಯ ಹಿಬಾ ಸುಲ್ತಾನ ತೃತೀಯ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಶಾಲ್ಯ ಹಾಗೂ ರಾಜೇಶ್ವರಿ ವಿದ್ಯಾಲಯದ ಸಾತ್ವಿ ಕೆ.ಟಿ. ಅವರುಗಳು ಸಮಾಧಾನರ ಬಹುಮಾನ ಪಡೆದುಕೊಂಡಿದ್ದಾರೆ.
ಬಿಳಿ ಗುಂಪು: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಣವ್ ಆರ್ ಆಚಾರ್ಯ ಪ್ರಥಮ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪಿ.ಎನ್. ಲಕ್ಷö್ಯ ದ್ವಿತೀಯ, ಸಂತ ಜೋಸೆಫರ ಶಾಲೆಯ ಮೌಲ್ಯ ಜಿ.ಪಿ. ತೃತೀಯ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎನ್ ಲಕ್ಷ ಭವಿತ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಮಮತ ಬಿ.ಜಿ. ಅವರುಗಳು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.