ಮಡಿಕೇರಿ, ಫೆ. ೧೩: ಸಾಂಪ್ರದಾಯಿಕ ವಿಧಿವಿಧಾನಗ ಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಂಬಯ್ಯ ಅವರ ಗದ್ದೆಯಲ್ಲಿ ಯುಕೊ ಸಂಘಟನೆಯ ನಾಲ್ಕನೇ ವರ್ಷದ ಬೇದ ಚಂಗ್ರಾAದಿಯ ಆಚರಣೆ ನಡೆಯಿತು.

ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ, ಸಾಂಪ್ರದಾಯಿಕವಾಗಿ ಕೈಎಣ್ಣೆಯನ್ನು ಭೂಮಿಗೆ ಸುರಿದು, ಮರದ ಬಾಚಣಿಕೆಯನ್ನಿಟ್ಟು, ‘ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್ - ಕುಂಬ್ಯಾತ್ ಮಳೆ ಆಯಿತ್ ಕಂದ್ ಲೂ ಕೂಳಾಡ್’ ಎಂದು ಪ್ರಾರ್ಥಿಸುವುದರ ಮೂಲಕ ಭೂಮಿತಾಯಿಯನ್ನು ಸ್ಮರಿಸಲಾಯಿತು.

ನಂತರ ಸುಜು ಕರುಂಬಯ್ಯ ಅವರ ಮನೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಒಂದು ಮಗುವಿನ ಸಮಗ್ರ ಬೆಳವಣಿಗೆಯ ಹಿಂದೆ ಒಬ್ಬ ತಾಯಿಯ ಪ್ರಭಾವ ಮಹತ್ವದ ಪಾತ್ರ ನಿರ್ವಹಿಸುವ ಹಾಗೆ ಒಂದು ಸಮುದಾಯದ ಸಮಗ್ರ ಬೆಳವಣಿಗೆಯಲ್ಲಿ ಭೂಮಿತಾಯಿಯ ಪ್ರಭಾವವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಬಾಂಧವ್ಯದ ಸಂಕೇತವಾಗಿ ಕೊಡವರು ಬೇದ ಚಂಗ್ರಾAದಿಯನ್ನು ಆಚರಣೆ ಮಾಡುತ್ತಾರೆ ಎಂದು ಹೇಳಿದರು.

ಅನಾದಿ ಕಾಲದಿಂದಲೂ ಕೊಡವರು ತಮ್ಮದೇ ಆದ ಸ್ವಂತ ಶಕ್ತಿಯಿಂದ, ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಪಾಲಿಸುತ್ತಾ ನಂಬಿಕೆಗಳನ್ನು ಉಳಿಸಿಕೊಳ್ಳುವುದರ ಮೂಲಕ ತಮ್ಮ ಏಳಿಗೆಯನ್ನು ಕಂಡುಕೊAಡ ಅಪರೂಪದ ಜನಾಂಗವಾಗಿದೆ. ಇತಿಹಾಸದಿಂದಲೇ ಯಾವುದೇ ರಾಜರಿಂದಾಗಲಿ, ರಾಜಕೀಯ ದಿಂದಾಗಲಿ ಕೊಡವರಿಗೆ ಅನುಕೂಲಗಳಾದ ಉದಾಹರಣೆಗಳೇ ಇಲ್ಲ. ಈಗಲೂ ಸಹ ಯಾವುದೇ ರಾಜಕೀಯ ಪಕ್ಷ ಅಥವ ಮುಖಂಡರುಗಳಿAದ ಕೊಡವರಿಗೆ ಒಳಿತಾಗುತ್ತದೆ ಎಂಬುವುದು ಕೇವಲ ಭ್ರಮೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವತ್ತ ನಾವೇ ಗಮನ ಹರಿಸುವುದರ ಮೂಲಕ ನಮ್ಮನ್ನು ನಾವು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರಪಂಚದಾದ್ಯAತ ಹರಡಿರುವ ಕೊಡವರು ಕನಿಷ್ಟ ಹಬ್ಬ ಹರಿದಿನಗಳು, ಕಾರೋಣಂಗ್ ಕೊಡ್ಪ ಕಾರ್ಯಕ್ರಮಗಳಿಗಾದರೂ ತಮ್ಮ ನೆಲೆಗೆ ಮರಳುವಂತಾಗಬೇಕು ಆ ಮೂಲಕ ತಾವು ಹುಟ್ಟಿದ ಮಣ್ಣಿನ ಬಾಂಧವ್ಯ ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ಭೌತಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮೊದಲಿಗೆ ತಪ್ಪಡಕ ಕಟ್ಟಿ ಪ್ರಾರ್ಥಿಸಲಾಯಿತು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿದರು.

ಸಭೆಯಲ್ಲಿ ಚೆಪ್ಪುಡಿರ ಪ್ರತಿಮ ಕರುಂಬಯ್ಯ, ಪನ್ನಗಾ ಕರುಂಬಯ್ಯ, ಕಿರಣ್ ಸುಬ್ಬಯ್ಯ, ರೇಣು ಸುಬ್ಬಯ್ಯ, ಆಪಟ್ಟಿರ ಜಾನಕಿ ಚಂಗಪ್ಪ, ಚಕ್ಕೇರ ರಂಜಿತ್, ಸುಮ ರಂಜಿತ್, ಕೃಷಿಕಾ ರಂಜಿತ್, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಸುಮಿ ರಾಬಿನ್, ದೀನ ಉತ್ತಪ್ಪ, ತನ್ವಿ ಉತ್ತಪ್ಪ,

ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ಅರುಣ್ ಸೋಮಯ್ಯ, ಪ್ರಿಯಾ ಅರುಣ್, ಅಜಿನಿಕಂಡ ಸೂರಜ್ ತಿಮ್ಮಯ್ಯ, ಬೊಳಿಯಂಗಡ ಬೋಪಣ್ಣ, ವೇದಾಂತ್ ಸೋಮಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲAಡ ಗ್ರೇಸಿ ಪೂಣಚ್ಚ, ದಿಲನ್ ದೇವಯ್ಯ ಪೂಣಚ್ಚ, ಮುಕ್ಕಾಟಿರ ದಿವಿನ್ ತಿಮ್ಮಯ್ಯ, ನಾಯಕಂಡ ರವಿ ಉತ್ತಪ್ಪ, ಪುಷ್ಪ ಉತ್ತಪ್ಪ, ಪಾಲಚಂಡ ಸದಾ ಪೂವಯ್ಯ, ಕಲಾ ಪೂವಯ್ಯ, ಕಾಂಡೇರ ಲಕ್ಷಿö್ಮ ಉಪಸ್ಥಿತರಿದ್ದರು.