ಮಡಿಕೇರಿ, ಫೆ. ೧೨: ಕಳೆದ ೨೫ ವರ್ಷಗಳಿಂದಲೂ ಅಧಿಕ ಸಮಯದಿಂದ ದಕ್ಷಿಣ ಕೊಡಗಿನ ಕೂಟಿಯಾಲ ರಸ್ತೆ-ಸೇತುವೆಯ ವಿಚಾರ ನೆನೆಗುದಿಯಲ್ಲೇ ಬಿದ್ದಿದೆ. ಅರಣ್ಯ ಇಲಾಖೆಯ ತೊಡಕಿನಿಂದಾಗಿ ಉಂಟಾದ ಸಮಸ್ಯೆಗೆ ಇನ್ನೂ ಪರಿಹಾರ ಅಂತಿಮಗೊAಡಿಲ್ಲ. ಈ ಕಾರಣದಿಂದಾಗಿ ಈ ವಿವಾದ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಅರಣ್ಯ ಇಲಾಖೆಯ ಅನುಮತಿಗಾಗಿ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಯಲ್ಲಿ ಹಲವಾರು ನ್ಯೂನ್ಯತೆಗಳು ಇದ್ದ ಕಾರಣದಿಂದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಮೂಲಕ ಸಲ್ಲಿಸಲಾಗಿದ್ದ ಈ ಪ್ರಸ್ತಾವನೆ ೨೦೨೨ರ ಡಿಸೆಂಬರ್ ೨೦ ರಂದು ತಿರಸ್ಕೃತಗೊಂಡಿದೆ.
ಸAಪೂರ್ಣವಾದ ವಿವರ-ದಾಖಲೆಗಳ ಸಹಿತವಾಗಿ ಪ್ರಸ್ತಾವನೆ ಇರದಿದ್ದ ಕಾರಣದಿಂದಾಗಿ ಇದನ್ನು ತಿರಸ್ಕರಿಸಲಾಗಿದ್ದು, ಇದೀಗ ಕಳೆದ ೧೦ ದಿನಗಳ ಹಿಂದೆ ಹೊಸದಾಗಿ ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಅರಣ್ಯ ಇಲಾಖೆಯ ಮೂಲಕ ಉಲ್ಲೇಖಿಸಲಾಗಿದ್ದ ನ್ಯೂನ್ಯತೆಗಳನ್ನು ಸರಿಪಡಿಸಿ ಕಳುಹಿಸಲಾಗಿದೆ. ಇನ್ನೂ ಈ ಬಗ್ಗೆ ಅರಣ್ಯ ಇಲಾಖೆಯಿಂದ ಉತ್ತರ ಬಂದಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹದೇವ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕೂಟಿಯಾಲ ಸಂಪರ್ಕ ಸೇತುವೆಯ ೧.೫ ಕಿ.ಮೀ. ಜಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಇದಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಗೆ ನೀಡಬೇಕಾದ ಪರ್ಯಾಯ ಜಾಗದ ಸಮರ್ಪಕ ದಾಖಲಾತಿ ಇಲ್ಲ. ದಾಖಲಾತಿಯೊಂದಿಗೆ ನಕ್ಷೆ, ಸರ್ವೆ ನಂಬರ್ನAತಹ ಸೂಕ್ತ ವಿವರಗಳಿಲ್ಲದ ಕಾರಣಕ್ಕಾಗಿ ಪ್ರಸ್ತಾವನೆ ಅಪೂರ್ಣ ಎಂಬುದಾಗಿ ತಿಳಿಸಿ ಇದು ತಿರಸ್ಕೃತಗೊಂಡಿದೆ.
ಈ ನಡುವೆ ಬಾಡಗರಕೇರಿ-ಕೂಟಿಯಾಲ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಎರಡು ದಿನಗಳ ಹಿಂದೆ ಭೂಮಿಪೂಜೆ ನೆರವೇರಿಸಿರುವುದು ಒಂದಷ್ಟು ಗೊಂದಲ ಮೂಡಿಸಿದೆ. ವಿಶೇಷ ಅನುದಾನದಡಿ ೨.೬೦ ಕೋಟಿ ವೆಚ್ಚದ ಕಾಮಗಾರಿ ಒಟ್ಟು ೨.೮೫ ಕಿ.ಮೀ.ಯನ್ನು ಒಳಗೊಂಡಿದೆ. ಇದರಲ್ಲಿ ೧.೫ ಕಿ.ಮೀ.ನಷ್ಟು ಅರಣ್ಯ ಇಲಾಖೆಯ ಜಾಗ ಬರುವುದರಿಂದ ಇಲ್ಲಿ ಕಾಮಗಾರಿ ನಡೆಸಲು ಸದ್ಯಕ್ಕೆ ಅವಕಾಶವಿಲ್ಲ.
ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹದೇವ್ ಅವರು ಸದ್ಯಕ್ಕೆ ಗ್ರಾಮದೊಳಗೆ ಬರುವ ೧,೩೦೦ ಮೀಟರ್ನಷ್ಟು ಅಂತರದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿ ಸುವುದು ಹಾಗೂ ೨ ಸೇತುವೆಗಳ ನಿರ್ಮಾಣ ಇದರಲ್ಲಿ ಒಳಗೊಂಡಿದೆ. ಈ ಕೆಲಸಕ್ಕೆ ಅರಣ್ಯ ಇಲಾಖೆಯ ಅನುಮತಿ ಬೇಕಿಲ್ಲ ಎಂದಿದ್ದಾರೆ.
ಸAಪೂರ್ಣವಾದ ಕಾಮಗಾರಿ ಪೂರ್ಣಗೊಳಿಸಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಸಿಗಲೇಬೇಕಾಗಿದ್ದು, ಅಲ್ಲಿಯತನಕ ಬಾಡಗರಕೇರಿ-ಬಿಟ್ಟಂಗಾಲ ರಸ್ತೆ ಸಂಪರ್ಕ ಕನಸಿನ ಮಾತೇ ಆಗಿದೆ. ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಡುವೆ ಇದರ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಮುಂದೆ ಯಾವ ಅಂತಿಮ ತೀರ್ಮಾನವಾಗಬೇಕಿದೆ ಎಂಬುದನ್ನು ಕಾದು ನೋಡಬೇಕಿದೆ.