ಸೋಮವಾರಪೇಟೆ, ಫೆ. ೧೨: ಮಾಜಿ ಸಚಿವ ಟಿ. ಜಾನ್ ಅವರ ನಿಧನ ಹಿನ್ನೆಲೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಟಿ. ಜಾನ್ ಅವರ ನಿಧನದಿಂದ ಒಬ್ಬ ಸಮಾಜ ಸೇವೆಯ ನಾಯಕನನ್ನು ಕಳೆದುಕೊಂಡAತಾಗಿದೆ ಎಂದರು. ಸಭೆಯಲ್ಲಿ ನಗರ ಘಟಕದ ಅಧ್ಯಕ್ಷ ಹೆಚ್.ಎ. ನಾಗರಾಜು, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಈ. ಜಯೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ಸಿ. ವೆಂಕಟೇಶ್, ಶೀಲಾ ಡಿಸೋಜಾ, ಪ್ರಮುಖರಾದ ಕೆ.ಎಂ. ಲೋಕೇಶ್, ಲಾರೆನ್ಸ್, ಮಂಜುನಾಥ್, ಮಹಮ್ಮದ್ ಬೇಟು ಮತ್ತಿತರರು ಇದ್ದರು.
ಸಂತಾಪ: ಟಿ. ಜಾನ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಂತಾಪ ಸೂಚಿಸುತ್ತದೆ ಎಂದು ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ತಿಳಿಸಿದ್ದಾರೆ.