ಮಡಿಕೇರಿ, ಫೆ. ೧೩: ಭಾಗಮಂಡಲ ಹೋಬಳಿ ಅಯ್ಯಂಗೇರಿ ಗ್ರಾಮದ ಶ್ರೀಕೃಷ್ಣ ಚಿನ್ನತಪ್ಪ ದೇವರ ವಾರ್ಷಿಕ ಉತ್ಸವಕ್ಕೆ ತಾ. ೧೪ರಂದು (ಇಂದು) ಚಾಲನೆ ದೊರೆಯಲಿದ್ದು, ತಾ. ೧೬ರ ತನಕ ನಡೆಯಲಿದೆ. ತಾ. ೧೪ರಂದು (ಇಂದು) ೬ ಗಂಟೆಗೆ ಬೆಳಗಿನ ಹಬ್ಬ, ತಾ. ೧೫ರಂದು ದೊಡ್ಡಹಬ್ಬ ಪಟ್ಟಣಿ, ತಾ. ೧೬ರಂದು ಭಂಡಾರ ಇಡುವುದು ನಡೆಯಲಿದೆ.

ತಾ. ೧೪ರಂದು ಸಂಜೆ ೭ ಗಂಟೆಯಿAದ ೧೦ ಗಂಟೆಯವರೆಗೆ ದೀರಪ್ಪಜಿ ಮತ್ತು ಅಪ್ಪತ್ ಪೂಜೆ ನಡೆಯುತ್ತದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉತ್ಸವ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.