ನಾಪೋಕ್ಲು, ಫೆ. ೧೧ : ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಕೆ. ಜಿ ಬೋಪಯ್ಯ ಹೇಳಿದರು.
ನಾಪೋಕ್ಲುವಿನ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ಅಪ್ಪಚೆಟ್ಟೋಳಂಡ ಕೌಟುಂಬಿಕ ಹಾಕಿ ಉತ್ಸವದ ಮಾಹಿತಿ ಕೈಪಿಡಿ ಬಿಡುಗಡೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
೧೯೯೭ ರಲ್ಲಿ ಕೊಡಗಿನಲ್ಲಿ ಹಾಕಿ ಉತ್ಸವ ಆರಂಭವಾಗಿದ್ದು ವಿವಿಧ ಕುಟುಂಬಗಳು ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ. ಈ ಹಿಂದಿನ ಕೊಡವ ಹಾಕಿ ಉತ್ಸವಕ್ಕಾಗಿ ಸರ್ಕಾರ ೫೦ ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಇದೀಗ ಸರ್ಕಾರವು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಜನಾಂಗದವರು ಕ್ರೀಡಾಕೂಟ ಗಳನ್ನು ನಡೆಸುತ್ತಿದ್ದು ಪ್ರತಿಭೆಗಳಿಂದ ಸಮಾಜದ ಒಗ್ಗೂಡುವಿಕೆ ಸಾಧ್ಯವಾಗಿದೆ. ಹಾಕಿ ಉತ್ಸವಕ್ಕೆ ಶಾಶ್ವತ ಅನುದಾನ ಸಿಗುವಂತಾಗಬೇಕು ಎಂದರು.
ಹಾಕಿ ಕರ್ನಾಟಕದ ಕಾರ್ಯ ದರ್ಶಿ, ಮಾಜಿ ಒಲಂಪಿಯನ್ ಡಾ.ಎ.ಬಿ ಸುಬ್ಬಯ್ಯ ಮಾತನಾಡಿ ವಿವಿಧ ರೀತಿಯ ಟೂರ್ನಿಗಳನ್ನು ನಡೆಸುವುದರಿಂದ ಜಿಲ್ಲೆಯ ಮಕ್ಕಳಿಗೆ ಹಾಗೂ ಯುವ ಜನರಿಗೆ ಪ್ರೋತ್ಸಾಹ ಸಿಗುವಂತಾಗಿದೆ. ಕೌಟುಂಬಿಕ ಹಾಕಿ ಉತ್ಸವಗಳಿಂದ ಸ್ಥಳೀಯ ಮಕ್ಕಳಿಗೆ ಅವಕಾಶ ದೊರೆತಂತಾಗುತ್ತದೆ ನುರಿತ ರಾಷ್ಟಿçÃಯಮಟ್ಟದ ಆಟಗಾರರು ಕೊಡಗಿನಲ್ಲಿ ಹಾಕಿ ಆಡುವುದರಿಂದ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಾಕಿ ಉತ್ಸವ ಆಯೋಜನ ಸಮಿತಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದು ಗಿನ್ನಿಸ್ ದಾಖಲೆಗಾಗಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹಾಕಿ ಉತ್ಸವವು ಮಾರ್ಚ್ ೧೭ ರಿಂದ ಆರಂಭಗೊAಡು ಏಪ್ರಿಲ್ ೧೦ ರವರೆಗೆ ೨೩ ದಿನಗಳ ಕಾಲ ನಡೆಯಲಿದೆ. ಪ್ರತಿದಿನ ೨೪ ಪಂದ್ಯಗಳು ಮೂರು ಮೈದಾನಗಳಲ್ಲಿ ನಡೆಯಲಿದೆ. ೨೦೧೮ ರಲ್ಲಿ ೨೩೦ ತಂಡಗಳು ಪಾಲ್ಗೊಂಡಿದ್ದು, ಈ ಬಾರಿ ೩೫೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಹಾಗೂ ಲಾಂಛನವನ್ನು ರಚಿಸಿದ ಸುಳ್ಳಿಮಾಡ ದರ್ಶನ್ ಪೂವಪ್ಪ ಅವರನ್ನು ಸನ್ಮಾನಿಸಲಾಯಿತು.
ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಮಿಟ್ಟು ಈರಪ್ಪ, ಕೊಡವ ಹಾಕಿ ಕೂರ್ಗ್ ಅಸೋಸಿಯೇಷನ್ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಬಡಕಡ ದೀನ ಪೂವಯ್ಯ, ನಿರ್ದೇಶಕ ಮಾಳೇಟಿರ ಶ್ರೀನಿವಾಸ್, ಕೊಡವ ಹಾಕಿ ಅಸೋಸಿಯೇಷನ್ನ ಪಳಂಗAಡ ಲವ, ರಾಜಾ ಭೀಮಯ್ಯ, ೨೦೨೪ ಮುಂದಿನ ಹಾಕಿ ಉತ್ಸವದ ಆಯೋಜನ ಸಮಿತಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಉಪಸ್ಥಿತರಿದ್ದರು.
ಕಲಿಯಂಡ ಬೀನಾ ನವೀನ್ ಪ್ರಾರ್ಥಿಸಿದರು. ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ಕ್ರೀಡಾಕೂಟ ಕಾರ್ಯದರ್ಶಿದ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ ವಂದಿಸಿದರು.