ಗೋಣಿಕೊಪ್ಪ ವರದಿ, ಫೆ. ೧೧: ಬೆಂಗಳೂರಿನಲ್ಲಿ ಆಯೋಜಸಿದ್ದ ಎನ್ಸಿಸಿ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಚಟ್ಟಂಡ ಬಿ. ಲೇಪಾಕ್ಷಿ ಮುಖ್ಯಮಂತ್ರಿಗಳ ಪ್ರಶಂಸ ಪದಕ ಪ್ರಶಸ್ತಿ ಸ್ವೀಕರಿಸಿದರು.
ಎನ್ಸಿಸಿಯ ಡಿಡಿಜಿ ಏರ್ ಕಮೋಡರ್ ಭುಪೇಂದ್ರ ಸಿಂಗ್ ಕನ್ವರ್, ಎನ್ಸಿಸಿ ಬೆಂಗಳೂರು (ಎ) ಕಮಾಂಡರ್ ಕರ್ನಲ್ ಭಸಂತ್ಸಿAಗ್ ಪ್ರದಾನ ಮಾಡಿದರು.
೨೦೨೨ ರಲ್ಲಿ ಆಲ್ ಇಂಡಿಯಾ ಟಾಲ್ಸೇನಾ ಕ್ಯಾಂಪ್ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರ್ನ ಕಂಟಿಜೆAಟ್ ಕಮಾಂಡರ್ ನಿರ್ವಹಣೆ ಹಿನ್ನೆಲೆ ಪ್ರಶಸ್ತಿ ಪಡೆದುಕೊಂಡರು.