ಗೋಣಿಕೊಪ್ಪಲು, ಫೆ. ೧೧: ರೈತರು ಕಾಡಾನೆಗಳ ಉಪಟಳವನ್ನು ಹೇಗಾದರೂ ಸಹಿಸುತ್ತೇವೆ. ಆದರೆ ಮಂಗಗಳ ಕಾಟವನ್ನು ಸಹಿಸಲು ಸಾಧ್ಯವಿಲ್ಲ. ಬೆಳೆದು ನಿಂತ ಕಾಫಿ ಫಸಲುಗಳು ಸೇರಿದಂತೆ ಎಲ್ಲಾ ವಿಧದ ಹಣ್ಣು ಹಂಪಲುಗಳನ್ನು ತಿಂದು ನಾಶ ಪಡಿಸುತ್ತಿವೆ. ಅಲ್ಲದೆ ಮನೆಯ ಮುಂಭಾಗದಲ್ಲಿ ಲೈನ್ಮನೆಗಳಲ್ಲಿ ನುಗ್ಗಿ ವಸ್ತುಗಳನ್ನು ನಾಶಪಡಿಸುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಮಂಗಗಳು ಇಲ್ಲಿ ಬಂದು ನೆಲೆಸಿವೆ. ಕೂಡಲೇ ಮಂಗಗಳನ್ನು ತೆರವುಗೊಳಿಸುವ ಕಾರ್ಯ ಅರಣ್ಯ ಇಲಾಖೆ ಕೈಗೆತ್ತಿಕೊಳ್ಳ ಬೇಕೆಂದು ಗ್ರಾಮಸ್ಥರು ಒತ್ತಾಯಿ ಸಿದರು. ಗಡಿಭಾಗ ಕುಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳೀಯ ಬ್ಯಾಂಕ್ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಗ್ರಾಮಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಹಿರಿಯರು ಹಾಗೂ ಕಾಫಿ ಬೆಳೆಗಾರರು ಗ್ರಾಮಸಭೆಯಲ್ಲಿ ತಮಗಾಗುವ ಸಮಸ್ಯೆಗಳನ್ನು ಬೆಳಕು ಚೆಲ್ಲಿದರು. ಹಲವು ವರ್ಷಗಳಿಂದ ವನ್ಯಪ್ರಾಣಿಗಳ ಹಾವಳಿಯಿಂದ ಫಸಲು ನಾಶವಾಗಿವೆ. ಇನ್ನು ಕೂಡ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಲಭಿಸಿಲ್ಲ, ವನ್ಯ ಪ್ರಾಣಿಗಳ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮದ ಮುಕ್ಕಾಟೀರ ನವೀನ್ ಅಯ್ಯಪ್ಪ ಗಮನ ಸೆಳೆದರು. ಈ ವೇಳೆ ಸ್ಥಳದಲ್ಲಿದ್ದ ಶ್ರೀಮಂಗಲ ವನ್ಯಜೀವಿ ವಿಭಾಗದ ಅಧಿಕಾರಿ ಮಾತನಾಡಿ ಪರಿಹಾರವನ್ನು ಮುಂದಿನ ಕೆಲವು ದಿನಗಳಲ್ಲಿ ಫಲಾನುಭವಿಯ ಖಾತೆಗೆ ಜಮಾಮಾಡಲಾಗುವುದು ಈ ಬಗ್ಗೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಡಾನೆಗಳ ನಿಯಂತ್ರಣಕ್ಕೆ ಆನೆ ಕಂದಕ, ಸೋಲಾರ್ ತಂತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಕೆಲಸ ಪ್ರಗತಿಯಲ್ಲಿದೆ ಎಂದರು. ಕುಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಟಿ.ಎಂ. ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಸದಸ್ಯರಾದ ಹೆಚ್.ವೈ. ರಾಮಕೃಷ್ಣ ಮಾತನಾಡಿ, ಕುಟ್ಟ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಇರುವ ರಸ್ತೆಯ ಬದಿಗಳನ್ನು ಅಗಲೀಕರಣ ಮಾಡಿ ಪಾರ್ಕಿಂಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಸರ್ಕಾರದ ವತಿಯಿಂದ ರಸ್ತೆ ಅಭಿವೃದ್ದಿಗೆ ಅನುದಾನ ಮಂಜೂ ರಾಗಿದ್ದು ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಈ ವೇಳೆ ರಸ್ತೆಯ ಎರಡು ಬದಿಯಲ್ಲಿಯು ಕೊಂಚ ಮಟ್ಟಿಗೆ ಅಗಲೀಕರಣಗೊಳಿಸಿದ್ದಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಅನುಕೂಲ ವಾಗಲಿದೆ. ಪೊಲೀಸರು ಇರುವ ವ್ಯವಸ್ಥೆಯಲ್ಲಿ ಟ್ರಾಫಿಕ್ನ್ನು ನಿಯಂತ್ರಿಸಬೇಕು ಎಂದರು.
ಪಟ್ಟಣದಲ್ಲಿರುವ ಹಲವು ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ನಿಯಮ ಬಾಹಿರವಾಗಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಕಾರ್ಮಿಕ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇದರಿಂದ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಈ ನಿಟ್ಟಿನಲ್ಲಿ ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಶಿಕ್ಷಕರು ಗ್ರಾಮ ಸಭೆಯ ಗಮನ ಸೆಳೆದರು. ಈ ವೇಳೆ ಪ್ರತಿಕ್ರಿಯಿಸಿದ ಸಭೆಯ ನೋಡಲ್ ಅಧಿಕಾರಿ ಬಿ.ಜಿ. ಗಿರೀಶ್ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಲವು ಅಂಗಡಿಗಳಿಗೆ ದಿಢೀರ್ ಭೇಟಿ ನೀಡುವುದರಿಂದ ಇಂತಹ ಸಮಸ್ಯೆ ಗಳನ್ನು ಬಗೆಹರಿಸಬಹುದು ಅಗತ್ಯವಿದ್ದಲ್ಲಿ ಅಂಗಡಿಗಳ ಲೈಸನ್ಸ್ ರದ್ದುಗೊಳಿಸುವಂತೆ ಸೂಚನೆ ನೀಡಿದರು. ಪಟ್ಟಣದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಕುಟ್ಟ ಭಾಗದಲ್ಲಿ ಎರಡು ಲೈನ್ಮನ್ಗಳು ವಾಸ್ತವ್ಯ ಹೂಡಬೇಕು. ಇದರಿಂದ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ಸದಸ್ಯರಾದ ರಾಮಕೃಷ್ಣ ಸಭೆಯ ಗಮನ ಸೆಳೆದರು. ಈ ವೇಳೆ ಸ್ಥಳದಲ್ಲಿದ್ದ ಸೆಸ್ಕ್ ಸಹಾಯಕ ಇಂಜಿನಿಯರ್ ಮಾತನಾಡಿ ನಾನು ನೂತನವಾಗಿ ಆಗಮಿಸಿದ್ದು ಕಳೆದ ಒಂದು ತಿಂಗಳಿನಿAದ ಕೆಲಸ ನಿರ್ವಹಿ ಸುತ್ತಿದ್ದೇನೆ. ಇಲ್ಲಿಯ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ವಿದ್ಯುತ್ ನೀಡುತ್ತೇವೆ. ಲೈನ್ ಮನ್ಗಳಿಗೆ ಸೂಕ್ತ ವಸತಿ ಗೃಹ ಇಲ್ಲದಿರುವುದರಿಂದ ಇಲ್ಲಿ ವಾಸ್ತವ್ಯ ಹೂಡಲು ಸಾಧ್ಯವಾಗುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಸದಸ್ಯರಾದ ತೀತಿರ ಎಂ. ತೀರ್ಥ ಪಂಚಾಯಿತಿ ಆವರಣ ದಲ್ಲಿ ಈ ಹಿಂದೆ ಲೈನ್ಮನ್ಗಳಿಗೆ ವಸತಿ ಗೃಹವನ್ನು ನೀಡಲಾಗಿತ್ತು. ಇದನ್ನು ದುರಸ್ಥಿ ಪಡಿಸಲಾಗುವುದು ಕೂಡಲೇ ಲೈನ್ಮನ್ ಕುಟ್ಟ ಭಾಗದಲ್ಲಿ ವಾಸ್ತವ್ಯ ಹೂಡುವಂತೆ ಕ್ರಮ ಕೈಗೊಳ್ಳಲು ಸೆಸ್ಕ್ ಇಂಜಿನಿಯರ್ಗೆ ನಿರ್ದೇಶನ ನೀಡಿದರು.
ಗ್ರಾಮದಲ್ಲಿ ನಿರಂತರವಾಗಿ ವನ್ಯ ಪ್ರಾಣಿಗಳ ಹಾವಳಿ ಇರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಗ್ರಾಮದ ಪ್ರಮುಖರೊಂದಿಗೆ ವಿಶೇಷ ಸಭೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ನೋಡಲ್ ಅಧಿಕಾರಿ ಸಭೆಗೆ ತಿಳಿಸಿದರು.
ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳು ಕಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ಸಭೆಯು ನಿರ್ಣಯ ಕೈಗೊಂಡಿತು. ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ಇಲಾಖೆ ಕಾರ್ಯ ಕ್ರಮಗಳ ಬಗ್ಗೆ ವಿವರ ನೀಡಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಹೆಚ್.ಎಸ್. ಅನಿಲ್ ಕುಮಾರ್ ಸ್ವಾಗತಿಸಿ, ಗ್ರಾಮ ಸಭೆಯ ಉದ್ದೇಶಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಪಿ.ಎಂ. ದಿವ್ಯ, ಸದಸ್ಯರಾದ ಜೆ.ಡಿ. ಮಣಿ, ಹೆಚ್.ಎನ್. ಹೇಮಾ, ಜೆ.ಎಸ್. ಲಕ್ಷಿö್ಮ, ವಿನೋದ್, ಎಂ.ಕೆ. ಶಾಂತಿ, ಕೆ. ಜನಾರ್ಧನ್, ವೈ.ಎನ್. ಮೀನಾ, ಪಿ.ಸಿ. ಸುಬ್ಬ, ಪಿ.ಯು. ರಮ್ಲಾ, ಬಿ.ಕೆ. ಪ್ರೇಮ, ತೀತಿರ ಎಂ. ತೀರ್ಥ ಸೇರಿದಂತೆ ಇನ್ನಿತರ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಪಂಚಾಯಿತಿ ಸಿಬ್ಬಂದಿಗಳಾದ ಪಿ.ಎಂ. ಅಮೃತ, ಗಣೇಶ್ ಉಪಸ್ಥಿತರಿದ್ದರು.