ಮಡಿಕೇರಿ, ಫೆ. ೧೧: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನ ವತಿಯಿಂದ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ, ಬ್ಯಾಂಕಿನ ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಿರ್ದೇಶಕರುಗಳಾದ ಬಿ.ಕೆ. ಜಗದೀಶ್, ಜಿ.ಎಮ್. ಸತೀಶ್ ಪೈ, ಕಾವೇರಮ್ಮ ಸೋಮಣ್ಣ, ಕನ್ನಂಡ ಸಂಪತ್, ಬಿ.ವಿ. ರೋಷನ್ ಹಾಗೂ ಕೆ.ಆರ್. ನಾಗೇಶ್ ಉಪಸ್ಥಿತರಿದ್ದರು.