ಮಡಿಕೇರಿ, ಫೆ. ೧೧: ಮಾಜಿ ಸಚಿವ ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರಾಗಿದ್ದ ಟಿ. ಜಾನ್ ಅವರ ಅಂತ್ಯಕ್ರಿಯೆ ಶನಿವಾರದಂದು ಬೆಂಗಳೂರಿನಲ್ಲಿ ನೆರವೇರಿತು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ಹಲವು ಪ್ರಮುಖರು ಭಾಗಿಗಳಾಗಿದ್ದರು. ಅಲ್ಲಿನ ಚರ್ಚ್ನಲ್ಲಿ ನಡೆದ ವಿಧಿವಿಧಾನದ ಸಂದರ್ಭ ಧರ್ಮಜ ಉತ್ತಪ್ಪ ಅವರು ಜಾನ್ ಅವರು ಕೊಡಗು ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಲ್ಲಿಸಿದ್ದ ಕೆಲಸ-ಕಾರ್ಯಗಳ ಕುರಿತಾಗಿ ಮಾತನಾಡಿ, ಪಕ್ಷದಿಂದ ಸಂತಾಪ ವ್ಯಕ್ತಪೊಡಿಸಿದರು.