(ಕಳೆದ ಸಂಚಿಕೆಯಿAದ)
ಶ್ರೀ ಗಣಪತಿ ಅವರು ಎರಡು ಹೆಸರನ್ನು ಇಟ್ಟು ನಾಮಕರಣ ಮಾಡಿದ್ದನ್ನು ತಿಳಿದ ಶ್ರೀ ತಿರುಚ್ಚಿ ಸ್ವಾಮಿಗಳು ಗಣಪತಿ ಎಂಬ ಹೆಸರು ಇವರಿಗಿತ್ತು. ಇನ್ನು ಮೇಲೆ ನಿನಗೆ ವಿವೇಕಾನಂದ ಎಂಬ ಹೆಸರೇ ಇರಲಿ ಎಂದು ಹೇಳಿ ಆಶೀರ್ವದಿಸಿದರು. ಅಂದಿನಿAದ ಶ್ರೀ ವಿವೇಕಾನಂದ ಸ್ವಾಮಿಗಳು ಊರವರ ಭಜನೆಯಲ್ಲಿ ಹಾರ್ಮೋನಿಯಂ ಸಹಿತವಾಗಿ ಭಾಗವಹಿಸುವುದು ಅವರೆಲ್ಲರಿಗೂ ಮುದ ನೀಡಿ ಊರವರೆಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಆ ಸಮಯದಲ್ಲಿ ತಲಕಾವೇರಿಯಲ್ಲಿ ಶ್ರೀ ತಿರುಚಿ ಸ್ವಾಮಿಗಳು ಸ್ಥಾಪನೆ ಮಾಡಿದ್ದ "ತಲಕಾವೇರಿ ನಾಟುಕೋಟೆ ನಗರತ್ತಾರ್ ಛತ್ರಮ್" ಎಂಬ ಸಂಸ್ಥೆಯನ್ನು ನೋಡಿಕೊಳ್ಳಲು ಇವರನ್ನು ನೇಮಕ ಮಾಡಿದರು. ೧೯೭೩ ಜನವರಿ ೨೬ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಕೈಲಾಸ ಆಶ್ರಮ ಬಿಟ್ಟು ತಲಕಾವೇರಿಗೆ ಹೊರಟರು. ಆಶ್ರಮದ ಮಹಾದ್ವಾರವನ್ನು ಬಿಟ್ಟು ಕೆಂಚನಹಳ್ಳಿ ಊರದ್ವಾರದ ಹತ್ತಿರ ಬರುವಾಗಲೇ ಊರ ಜನರೆಲ್ಲರೂ ಸೇರಿ ಹಿರಿಯರು ಕಿರಿಯರು ಪುರುಷರು ಸ್ತ್ರೀಯರು ಎಲ್ಲರೂ ಕಣ್ಣೀರು ಹರಿಸಿ ಸಂಕಟವನ್ನು ತೋಡಿಕೊಂಡು ಕಡೆಗೂ ಬೀಳ್ಕೊಟ್ಟರು. ಅವರ ಜೊತೆಯಲ್ಲಿದ್ದ ಶ್ರೀ ಚಿನ್ಮಯಾನಂದ ಸ್ವಾಮಿಗಳು. ಶ್ರೀಗುಣಾನಂದ ಸ್ವಾಮಿಗಳು. ಇವರೆಲ್ಲರಿಗೂ ಶ್ರೀ ಕೃಷ್ಣನು ಬೃಂದಾವನದಿAದ ಕಂಸನ ರಾಜಧಾನಿಗೆ ಹೊರಟ ಚಿತ್ರ ಮತ್ತು ಶ್ರೀರಾಮ ದೇವರು ಅಯೋಧ್ಯೆಯನ್ನು ಬಿಟ್ಟು ವನವಾಸಕ್ಕೆ ಹೊರಟ ಚಿತ್ರಗಳ ಸ್ಮರಣೆ ಉಂಟಾಯಿತು. ಅಂತೂ ಒಲ್ಲದ ಮನಸ್ಸಿನಲ್ಲಿ ಊರನ್ನು ತೊರೆದು ಪ್ರಯಾಣ ಮುಂದುವರಿಸಿದರು.
ತಲಕಾವೇರಿಯಲ್ಲಿ ಜೀವನ ಚೆನ್ನಾಗಿತ್ತು. ಮೊದಲೇ ತಲಕಾವೇರಿ ಎಂದರೆ ಅವರಿಗೆ ಭಕ್ತಿ. ಈಗಂತೂ ಆ ತಾಯಿಯ ಸನ್ನಿಧಿಯಲ್ಲಿ ವಾಸವೆಂದು ಅತೀ ಆನಂದ ಪಡುತ್ತಿದ್ದರು. ಹಲವಾರು ಭಕ್ತ ಜನರು ಪೂಜೆಗೆಂದು ಬರುತ್ತಿದ್ದರು. ಹಲವಾರು ಭಜನೆ ಗುಂಪು ಶಬರಿಮಲೆ ಭಕ್ತರು ಬೇರೆ ಬೇರೆ ಆಶ್ರಮಗಳ ಸ್ವಾಮಿಗಳು ವಿಶೇಷವಾಗಿ ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಸ್ವಾಮಿಗಳು ಅಲ್ಲಿ ಬಂದು ವಾಸ್ತವ್ಯ ಹೂಡುತ್ತಿದ್ದರು. ಅಂತಹ ಯಾತ್ರಿಕರಿಗೆಲ್ಲರಿಗೂ ಸೌಲಭ್ಯವನ್ನು ನೀಡುವುದು ಆ ಆಶ್ರಮದ ಉದ್ದೇಶವಾಗಿತ್ತು. ಶ್ರೀ ಕಾವೇರಿ ಆಶ್ರಮದ ಭಕ್ತರಿಗೆ ಯಾತ್ರೆ ಪೂಜೆಗಳನ್ನು ನಿರಾಳವಾಗಿ ಮಾಡಲು ಅನುಕೂಲವಾಯಿತೆಂದು ಅವರು ನಂಬಿದ್ದರು.
೧೯೭೪ರಲ್ಲಿ ಗುರುಪೂರ್ಣಿಮೆಯ ದಿನÀ ಶ್ರೀ ವಿವೇಕಾನಂದ ಅವರನ್ನು ಕರೆಸಿ ಶ್ರೀ ಪಳನಿ ಸುಬ್ರಹ್ಮಣ್ಯ ಸ್ವಾಮಿಗಳ ಸನ್ನಿಧಿಯಲ್ಲಿ ಸನ್ಯಾಸ ದೀಕ್ಷೆಯನ್ನು ಕೊಡಲಾಯಿತು. ಶ್ರೀ ವಿವೇಕಾನಂದ ಸ್ವಾಮಿಗಳು ಅದನ್ನು ಶ್ರೀ ಕಾವೇರಮ್ಮನ ಸನ್ನಿಧಿಯಲ್ಲಿಟ್ಟು ಆ ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ಸನ್ಯಾಸವನ್ನು ಸ್ವೀಕರಿಸಿದರು.
೧೯೮೩ ನೇ ಇಸವಿ ಈ ಕಾವೇರಿ ಆಶ್ರಮದ ಆಡಳಿತ ಮಂಡಳಿಯವರ ಬೇಡಿಕೆಯಂತೆ ಶ್ರೀ ಕಾವೇರಿ ಭಕ್ತ ಜನ ಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಆಶ್ರಮದ ಆಡಳಿತ ಮಂಡಳಿಯ ಮಾಸಿಕ ಸಭೆಗಳಿಗೆ ಬಂದು ಹೋಗುತ್ತಿದ್ದರು. ಕಾಕತಾಳೀಯ ಎಂಬAತೆ ಅದೇ ವರ್ಷ ಅವರ ಷಷ್ಟಾö್ಯಬ್ದಿಪೂರ್ತಿ ಪೂಜೆ ಹಾಗೂ ಶ್ರೀಕೈಲಾಸ ವಿನಾಯಕ ದೇವಸ್ಥಾನದ ಸ್ಥಾಪನೆ ಆಯಿತು.
೧೯೮೫ ರಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ (ಗುರುಗಳ ) ಜನ್ಮ ಶತಮಾನೋತ್ಸವದ ಸವಿನೆನಪಿಗಾಗಿ ಶ್ರೀ ಕೃಷ್ಣಾಶ್ರಮ (ಕೂಡಿಗೆ) ಸಮೀಪ ಶ್ರೀ ವಿಶ್ವ ಮಾತಾಜಿ ಅವರು ಮಹಿಳಾಶ್ರಮ ಸ್ಥಾಪನೆ ಮಾಡುವುದಕೋಸ್ಕರ ಸರಕಾರದಿಂದ ಕೊಂಡುಕೊAಡಿದ್ದ ಜಮೀನಿನಲ್ಲಿ ಸದ್ಗುರು ಅಪ್ಪಯ್ಯ ಸ್ವಾಮಿ ಶಾಲೆಯನ್ನು ಸ್ಥಾಪನೆ ಮಾಡುವ ತೀರ್ಮಾನವನ್ನು ಸಂಘದ ಸಮಿತಿಯವರು ಕೈಗೊಂಡÀರು. ಒಂದು ವರ್ಷ ಮುಂಚಿತವಾಗಿ ೧೯೮೪ನೇ ಇಸವಿಯಲ್ಲಿಯೇ ಶ್ರೀ ಕೃಷ್ಣಾಶ್ರಮದಲ್ಲಿ ೮ನೇ ತರಗತಿಯನ್ನು ಪ್ರಾರಂಭಿಸಲಾಯಿತು. ೧೯೮೫ ರಲ್ಲಿ ಶಾಲಾ ಕಟ್ಟಡವು ಸಿದ್ಧವಾಯಿತು. ಈ ಕಾರ್ಯದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಅವರು ಶ್ರೀ ಕಾಶಿ ಅಪ್ಪಸ್ವಾಮಿ ಅವರು ಅಸಾಧ್ಯವಾಗಿ ಶ್ರಮಿಸಿದರು. ಸ್ವಾತಂತ್ರ್ಯ ಬಂದು ೩೭ ವರ್ಷವಾದರೂ ಆ ಹಿಂದುಳಿದ ಪ್ರದೇಶದಲ್ಲಿ ಮಕ್ಕಳು ಪ್ರೌಢಶಾಲಾ ವಿದ್ಯೆ ವಂಚಿತರಾಗಿದ್ದರು. ಈ ಶಾಲೆ ಪ್ರಾರಂಭವಾಗಿ ೩೮ ವರ್ಷಗಳಾದವು. ಇಲ್ಲಿ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ತಾವು ಓದಿದ ಶಾಲೆಯ ಮೇಲಿನ ಪ್ರೀತಿಗಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಳೆದ ವರ್ಷ ಮಾಡಿದ್ದಾರೆ. ಶ್ರೀ ವಿವೇಕಾನಂದ ಶರಣ ಸ್ವಾಮಿಗಳು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದುಕೊಂಡು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
೧೯೮೧ ರಲ್ಲಿ ಶ್ರೀ ವಿಶ್ವ ಮಾತಾಜಿಯವರು ಮೈಸೂರಿನ ಎನ್. ಆರ್. ಮೊಹಲ್ಲಾದಲ್ಲಿ ಶ್ರೀ ಕಾವೇರಿ ಆಶ್ರಮದ ಒಂದು ಶಾಲೆಯನ್ನು ತೆರೆದರು. ಅದರ ಕಟ್ಟಡದ ಅಭಿವೃದ್ಧಿಗಾಗಿ ಶ್ರೀ ವಿವೇಕಾನಂದ ಶರಣ ಸ್ವಾಮಿಗಳು ತುಂಬಾ ಶ್ರಮಿಸಿದರು. ೧೯೮೯ರಲ್ಲಿ ಶ್ರೀ ವಿಶ್ವ ಮಾತಾಜಿ ಅವರು ಮಹಾಸಮಾಧಿಯನ್ನು ಹೊಂದಿದರು.
೧೯೯೮ರಲ್ಲಿ ಆಶ್ರಮವಾಸಿಗಳ ಹಾಗೂ ಭಕ್ತರ ಬೇಡಿಕೆಯಂತೆ ತಲಕಾವೇರಿ ವಾಸ್ತವ್ಯವನ್ನು ಬಿಟ್ಟು ಶ್ರೀ ಕಾವೇರಿ ಆಶ್ರಮಕ್ಕೆ ಬಂದರು. ೧೯೪೨ ರಲ್ಲಿ ಸ್ಥಾಪಿಸಲ್ಪಟ್ಟಿದ್ದ ವಿದ್ಯಾರ್ಥಿ ಭವನವು ಉತ್ತಮವಾದ ಕೆಲಸವನ್ನು ಮಾಡಿ ಕೊಂಡಿತ್ತು. ೩೫ ವಿದ್ಯಾರ್ಥಿಗಳನ್ನೊಳಗೊಂಡ ಈ ವಿದ್ಯಾರ್ಥಿ ಭವನವನ್ನು ಅನಂತರ ವಿದ್ಯಾರ್ಥಿಗಳ ಅಭಾವದಿಂದ ಮುಚ್ಚಲಾಯಿತು. ೧೯೯೮ರಲ್ಲಿ ಅದನ್ನು ಮಾರಾಟ ಮಾಡಿ ಬಂದ ಹಣದ ಜೊತೆಗೆ ಸ್ವಲ್ಪ ಹಣವನ್ನು ಸೇರಿಸಿ ಶಿಥಿಲವಾಗಿದ್ದ ಶ್ರೀ ಕಾವೇರಿ ಆಶ್ರಮದ ವಸತಿ ಗೃಹದ ವಿಭಾಗವನ್ನು ಹೊಸದಾಗಿ ಕಟ್ಟಿದರು. ಮೇಲ್ಚಾವಣಿಯ ನಂಬುಡುಮಾಡ ಸುಬ್ಬಯ್ಯ ಅವರ ಸುಪುತ್ರ ನರೇಂದ್ರ ಅವರು ಕೊಟ್ಟ ೧೦ ಲಕ್ಷ ರೂಪಾಯಿ ಧನ ಸಹಾಯ ದಿಂದ ಭೋಜನ ಶಾಲೆ ನಿರ್ಮಿಸ ಲಾಯಿತು.
ಶ್ರೀ ಕಾವೇರಿ ಕನ್ನಿಕಾಶ್ರಮದ ಆವರಣದಲ್ಲಿ ಭಗ್ನಗೊಂಡಿದ್ದ ಪುರಾತನ ಶ್ರೀ ಮಹಾ ವಿಷ್ಣು ದೇವಾಲಯವನ್ನು ಪುನರ್ ಉದ್ಯಾನ ಮಾಡಲು ಸಂಕಲ್ಪ ಮಾಡಿದ್ದನ್ನು ೨೦೧೨ರಲ್ಲಿ ಬೈತೂರು ದೇವಸ್ಥಾನದ ತಂತ್ರಿಗಳಾದ ಶ್ರೀ ರಾಜನ್ ಅವರ ನೇತೃತ್ವದಲ್ಲಿ ತೆರೆಯಲಾಯಿತು.
ಶ್ರೀ ವಿವೇಕಾನಂದ ಶರಣ ಸ್ವಾಮಿಗಳು ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಮತ್ತು ಅಲ್ಲಿಯೇ ಇನ್ನಿತರ ಸ್ವಾಮಿಗಳ ಸಂಪರ್ಕದಿAದಾಗಿ ಆ ಮಹಾ ಸಂಸ್ಥೆಯ ಹಲವಾರು ಉತ್ಸವಗಳಲ್ಲಿ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸುವ ಸಂದರ್ಭಗಳು ಒದಗಿ ಬಂದವು. ಆ ಸಂಸ್ಥೆಯು ಅತ್ಯುತ್ತಮವಾದ ಜನಹಿತ ಕಾರ್ಯಗಳನ್ನು ಮಾಡುತ್ತಾ ತುಂಬಾ ಜನಪ್ರಿಯವಾಗಿದೆ. ಆ ಸಂಸ್ಥಾನದ ಶ್ರೀ ಪುರುಷೋತ್ತಮಾನಂದನಾಥ ಮಹಾಸ್ವಾಮಿಗಳ ಜೊತೆಯಲ್ಲಿ ಹಲವಾರು ಸತ್ಸಂಗಗಳಲ್ಲಿ ಭಾಗಿಯಾಗುತ್ತಿ ದ್ದರು. ಶ್ರೀ ಶರಣಾನಂದ ಸ್ವಾಮಿಗಳು ಆದಿಚುಂಚನಗಿರಿಯಿAದ ಆಗಾಗ್ಗೆ ಭೇಟಿ ನೀಡಿ ಕಾರ್ಯಕಲಾಪಗಳಲ್ಲಿ ಧೈರ್ಯವನ್ನು ತುಂಬುತ್ತಿದ್ದರು.
ಶ್ರೀ ರಾಮಕೃಷ್ಣ ಸಂಸ್ಥೆಯ ಶ್ರೀ ಪುರುಷೋತ್ತಮಾನಂದ ಸ್ವಾಮಿಗಳ ಜೊತೆಯಲ್ಲಿ ಹಲವಾರು ಸತ್ಸಂಗಗಳಲ್ಲಿ ಭಾಗಿಯಾಗಿದ್ದರು. ಶ್ರೀ ಜಗದಾತ್ಮಾನಂದ ಸ್ವಾಮಿಗಳು, ಶ್ರೀ ಬೋಧ ಸ್ವರೂಪಾನಂದ ಸ್ವಾಮಿಗಳು, ಶ್ರೀ ಪರಹಿತಾನಂದ ಸ್ವಾಮಿಗಳು ಅವರೆಲ್ಲರೂ ಅಲ್ಲದೆ ಈ ಸಂಸ್ಥೆಯ ಹಲವಾರು ಸ್ವಾಮೀಜಿಗಳು ಶ್ರೀ ಕಾವೇರಿ ಆಶ್ರಮಕ್ಕೆ ಪ್ರತಿ ತಿಂಗಳ ಕೊನೆಯ ಶನಿವಾರ ಬರುತ್ತಿದ್ದರು ಅವರು ಇಲ್ಲಿ ಸತ್ಸಂಗಗಳನ್ನು ನಡೆಸುತ್ತಿದ್ದರು.
ಹುಬ್ಬಳ್ಳಿ ಹರ್ಷ ವಿದ್ಯಾ ಪೀಠಾಧಿಕಾರಿಗಳಾದ ಶ್ರೀ ಚಿದ್ರೂಪಾನಂದ ಸ್ವಾಮಿಗಳು ಶ್ರೀ ಕಾವೇರಿ ಆಶ್ರಮಕ್ಕೆ ಆಗಾಗ್ಗೆ ಆಗಮಿಸಿ ವೇದಾಂತ ಪ್ರವಚನ ಗೀತ ಜ್ಞಾನಯಜ್ಞಗಳನ್ನು ಶ್ರೀ ಗಾಯತ್ರಿ ಹೋಮಗಳನ್ನು ಮಾಡುತ್ತಾ ತುಂಬಾ ಶ್ರೇಯಸ್ಕರÀವಾದ ಸೇವೆಯನ್ನು ಮಾಡುತ್ತಿದ್ದರು.
೧೯೬೫ರ ಇಸವಿಯಲ್ಲಿ ನಾಗರಾಜ ಎಂಬ ಬಾಲಕ ಮಿಲಿಟರಿ ಸೇರಲು ಹೊರಟವನು ತನ್ನ ತಂದೆಯವರ ಗುರುಗಳಾದ ಶ್ರೀ ತಿರುಚಿ ಸ್ವಾಮಿಗಳನ್ನು ದರ್ಶನ ಮಾಡಬೇಕೆಂದು ಶ್ರೀ ಕೈಲಾಸ ಆಶ್ರಮಕ್ಕೆ ಬಂದರು. ಅಲ್ಲಿ ಶ್ರೀಗಳನ್ನು ನೋಡಿ ಪ್ರಭಾವಿತರಾಗಿ ಆಶ್ರಮದಲ್ಲೇ ಇರುತ್ತೇನೆಂದು ನಿರ್ಧಾರ ಮಾಡಿ ಆಶ್ರಮದ ಆಶ್ರಯವನ್ನು ಪಡೆದರು. ಶ್ರೀ ಗುರುಗಳು ಆತನ ಮೇಲೆ ತುಂಬಾ ಪ್ರೀತಿ ವಾತ್ಸಲ್ಯ ತೋರಿ ಶೃಂಗೇರಿ ಆಸ್ಥಾನದ ಪಂಡಿತರಾದ ಶ್ರೀ ಶಂಕರ ಶಾಸ್ತ್ರಿಗಳಿಂದ ಶ್ರೀ ವಿದ್ಯಾ ಶಿಕ್ಷಣವನ್ನು ಕೊಡಿಸಿ ತಾವೇ ದೇವಿ ಉಪಾಸನೆಯನ್ನು ಉಪದೇಶಿಸಿದರು. ೧೯೭೩ ರಲ್ಲಿ ಸನ್ಯಾಸ ದೀಕ್ಷೆಯನ್ನು ಕೊಟ್ಟು" ಶಿವಪುರಿ " ಸ್ವಾಮಿಗಳೆಂದು ನಾಮಕರಣ ಮಾಡಿದರು. ಶ್ರೀ ಕೈಲಾಸ ಆಶ್ರಮದ ಆಡಳಿತಾಧಿಕಾರಿಯಾಗಿ ನೇಮಿಸಿದರು ಅವರನ್ನು ಶ್ರೀ ವಿವೇಕಾನಂದ ಸ್ವಾಮಿಗಳ ಜೊತೆಯಲ್ಲಿ ಅಲ್ಲಿಯ ಶಾಲೆಯ ಆಡಳಿತದಲ್ಲಿ ಸಹಾಯ ಮಾಡಲೆಂದು ನೇಮಕ ಮಾಡಿದರು.
ಶ್ರೀ ಶಿವಪುರಿ ಸ್ವಾಮಿಗಳು ಕ್ರಮೇಣ ಒಂದು ಶಾಖಾ ಮಠವನ್ನು ೧೯೯೪ರಲ್ಲಿ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಸ್ಥಾಪಿಸಿದರು. ಅವರ ಅಧ್ಯಯನ ಕಾಲದಲ್ಲಿ ಉಪನಿಷತ್ ವಾಕ್ಯವಾದ ‘‘ಪ್ರಣವೋ ಧನು:......’’ ಎಂಬ ಶ್ಲೋಕವು ಅವರ ಮನಸ್ಸಿಗೆ ತುಂಬಾ ಹಿಡಿಸಿತ್ತು. ಅವರ ಆಶ್ರಮಕ್ಕೆ ‘‘ಓಂಕಾರ ಆಶ್ರಮ’’ ಎಂದು ಹೆಸರನ್ನಿಟ್ಟು ದ್ವಾದಶ ಜ್ಯೋತಿರ್ಲಿಂಗ ದೇವಾಲಯ ಸಂಕೀರ್ಣವನ್ನು ಸ್ಥಾಪನೆ ಮಾಡಿದರು.
೨೦೦೫ ರಲ್ಲಿ ಶ್ರೀ ಕಾವೇರಿ ಆಶ್ರಮದಲ್ಲಿ ಚಂಡಿಕಾಯಾಗವನ್ನು ಮಾಡಲು ನಿಶ್ಚಯಿಸಿ ಶ್ರೀ ಶಿವಪುರಿ ಸ್ವಾಮೀಜಿ ಅವರನ್ನು ಅಧ್ಯಕ್ಷರಾಗಿ ಅಹ್ವಾನಿಸಿದರು ಹಾಗೆ ಅವರ ಜೊತೆಯಲ್ಲಿ ಅವರ ಶಿಷ್ಯರಾದ ಶ್ರೀ ಮಧುಸೂದನಾನಂದ ಪುರಿ ಸ್ವಾಮಿಗಳು ಆಗಮಿಸಿದರು. ಮುಂದಕ್ಕೆ ಆಧ್ಯಾತ್ಮಿಕ ವಿಚಾರಗಳಿಗೆ ದಾರಿದೀಪ ತೋರಿಸಲಿಕ್ಕಾಗಿ ೨೦೧೨ ರಲ್ಲಿ ಆಡಳಿತ ಮಂಡಳಿಯಲ್ಲಿ ಕಾರ್ಯಾಧ್ಯಕ್ಷರಾಗಿ ಶ್ರೀ ಮಧುಸೂದನಾನಂದ ಪುರಿ ಸ್ವಾಮಿಗಳನ್ನು ಆಹ್ವಾನಿಸಲಾಯಿತು. ಅವರು ಒಪ್ಪಿಗೆಯನ್ನು ಸಹ ಕೊಟ್ಟರು.
ಈ ಕಾವೇರಿ ಆಶ್ರಮದಲ್ಲಿ ಹಿಂದೂ ಬಾಂಧವರ ಶಿವರಾತ್ರಿ. ಶರನ್ನವರಾತ್ರಿ, ಶ್ರೀ ಕೃಷ್ಣಾಷ್ಟಮಿ, ಶ್ರೀ ರಾಮನವಮಿ, ಶ್ರೀ ಕಾವೇರಿ ತೀರ್ಥ ಪೂಜೆ, ಶ್ರೀ ಗುರು ಪೂರ್ಣಿಮೆ ಮುಂತಾದ ಎಲ್ಲ ಹಬ್ಬಹರಿ ದಿನಗಳನ್ನು ಆಚರಿಸುತ್ತಾ ಬರುತ್ತಿದ್ದಾರೆ.
ಶ್ರೀ ಸ್ವಾಮಿ ವಿವೇಕಾನಂದರ ಮಹಾ ವಾಕ್ಯ "ಆತ್ಮನೋ ಮೋಕ್ಷಾರ್ಥ ಜಗದ್ದಿ ತಾಯಚ" ಇದನ್ನು ಅನುಸರಿಸಿ ಅವರು ಅಧ್ಯಾತ್ಮಿಕ ಜೀವನವನ್ನು ನಡೆಸಿಕೊಂಡು ಆತ್ಮ ಸಾಕ್ಷಾತ್ಕಾರಕ್ಕೋಸ್ಕರ ಸಾಧನೆಯನ್ನು ಮಾಡುತ್ತಾ ಪರೋಪಕಾರದ ಕಾರ್ಯಗಳನ್ನು ಮಾಡುತ್ತಾ ನೂರು ವರ್ಷಗಳನ್ನು ಕಳೆದಿರುವ ಅವರಿಗೆ ಮುಂದೆ ಸರ್ವ ಶ್ರೇಯಸ್ಸು ಉಂಟಾಗಲಿ ದಿವ್ಯ ಜಗನ್ಮಾತೆಯ ಆಶೀರ್ವಾದವು ಸದಾ ಇರಲಿ ಎಂದು ಆಶಿಸುತ್ತಾ ಅವರ ಆಶೀರ್ವಾದವು ನಮ್ಮೆಲ್ಲರಿಗೂ ಸರ್ವಶ್ರೇಯಸ್ಸನ್ನು ಉಂಟುಮಾಡಲೆAದು ಪ್ರಾರ್ಥಿಸೋಣ. ‘‘ಓಂ ತತ್ಸ್ ತ್ ಓಂ’’
(ಮುಗಿಯಿತು)
-ಶಶಿ ಮಗ್ಗುಲ, ವೀರಾಜಪೇಟೆ.