ನಾಪೋಕ್ಲು, ಫೆ. ೧೦: ನೆಲಜಿ ಸಹಕಾರ ದವಸ ಭಂಡಾರ ನಿಯಮಿತದ ನವೀಕೃತಗೊಂಡ ಕಟ್ಟಡ ಹಾಗೂ ಸಭಾಂಗಣಗಳ ಉದ್ಘಾಟನಾ ಸಮಾರಂಭ ಹಾಗೂ ಶತಮಾನೋತ್ಸವ ಸಮಾರಂಭ ತಾ. ೧೨ರಂದು ನೆಲಜಿ ಸಹಕಾರ ದವಸ ಭಂಡಾರದ ನೂತನ ಕಟ್ಟಡದಲ್ಲಿ ನಡೆಯಲಿದೆ.

ನೆಲಜಿ ಸಹಕಾರ ದವಸ ಭಂಡಾರದ ಅಧ್ಯಕ್ಷ ಬಾಳೆಯಡ ಸಿ ಕುಂಞಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಡಿರ ಕೆ .ನಂಜಪ್ಪ ಉಪಸ್ಥಿತರಿರುವರು. ದವಸ ಭಂಡಾರದ ಸಂಕೀರ್ಣಗಳ ಉದ್ಘಾಟನೆಯನ್ನು ಶಾಸಕ ಕೆ .ಜಿ ಬೋಪಯ್ಯ ನೆರವೇರಿಸುವರು.

ಹೊರ ಸಭಾಂಗಣದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ , ಸಭಾಂಗಣದ ಉದ್ಘಾಟನೆಯನ್ನು ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವೇದಿಕೆ ಉದ್ಘಾಟನೆಯನ್ನು ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಿ. ಗಣಪತಿ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಮಾಜಿ ಸಚಿವ ಯಂ.ಸಿ. ನಾಣಯ್ಯ, ಕರ್ನಾಟಕ ರಾಜ್ಯ ಸರಕಾರ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್ ಕೃಷ್ಣಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಇ. ಮೋಹನ್, ನಿವೃತ್ತ ಡಿ ಎಫ್ ಕ್ರೀಡಾ ಸಮಿತಿ ಅಧ್ಯಕ್ಷ ಅಪ್ಪುಮಣಿಯಂಡ ಸನ್ನು ಸೋಮಣ್ಣ, ನಬಾರ್ಡ್ ನಿವೃತ್ತ ಡಿಎಂ ಮುಂಡAಡ ಸಿ. ನಾಣಯ್ಯ, ನೆಲಜಿ ನಾಡು ಮರಣ ಫಂಡ್ ಅಧ್ಯಕ್ಷ ಮಣವಟ್ಟಿರ ಎಂ.ಚೆAಗಪ್ಪ ಉದ್ಯಮಿ ಮಂಡಿರ ಎ. ಜಯದೇವಯ್ಯ ದಾನಿಗಳಾದ ಬಾಳೆಯಡ ಸಿ. ಪ್ರಕಾಶ್ ನಾಣಯ್ಯ, ಹಾಗೂ ಅಚ್ಚಾಂಡಿರ ಬಿ ಅರುಣ್ ಭೀಮಯ್ಯ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಮಾಳೆಯಂಡ ಎ. ಅಯ್ಯಪ್ಪ, ಕೋಟೇರ ಪಿ. ಪಳಂಗಪ್ಪ ,ನಾಪನೆರವಂಡ ಸಿ. ಪೊನ್ನಪ್ಪ, ಕೋಟೆರ ಈ ಭೀಮಯ್ಯ ಕೈಬುಲಿರ ಕೆ ಚಿಣ್ಣಪ್ಪ,ಬಾಳೆಯಡ ಜಿ.ಉತ್ತಪ್ಪ, ಮುಂಡAಡ ಕೆ. ಪೊನ್ನಣ್ಣ, ಚೆಟ್ಟಿನೆರವಂಡ ಎಸ್.ಮಾದಪ್ಪ, ಮಾಜಿ ಕಾರ್ಯದರ್ಶಿ ಬದ್ದಂಜೆೆಟ್ಟೀರ ಬಿ.ನಾಣಯ್ಯ ಸ್ಥಳದಾನಿಗಳಾದ ಬಾಳೆಯಡ ಕುಟುಂಬಸ್ಥರನ್ನು ಸನ್ಮಾನಿಸಲಾಗುವುದು ಎಂದು ಸಹಕಾರ ದವಸ ಭಂಡಾರದ ಆಡಳಿತ ಮಂಡಳಿ ಹಾಗೂ ಶತಮಾನೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.