ಮುಳ್ಳೂರು, ಫೆ. ೧೦: ತಾ. ೧೧ (ಇಂದು) ಗೌಡಳ್ಳಿಯಲ್ಲಿ ನಡೆಯುವ ಸೋಮವಾರಪೇಟೆ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆದಿದೆ. ಗೌಡಳ್ಳಿಯ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಗೌಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು ೧೧ ದ್ವಾರಗಳನ್ನು ನಿರ್ಮಿಸಲಾಗಿದೆ. ದಿ. ವಿ.ಟಿ. ಈರಪ್ಪ ಮುಖ್ಯ ದ್ವಾರ, ದಿ. ಬೆಳ್ಳಿಯಪ್ಪ ಗೌಡರ ನೆನಪಿನ ದ್ವಾರ, ಹಾರಳ್ಳಿ ಚನ್ನಕೇಶವ ಸ್ವಾಮಿ ನೆನಪಿನ ದ್ವಾರ, ದಿ. ಹಿರಿಕರ ಸುಬ್ಬೇಗೌಡರ ನೆನಪಿನ ದ್ವಾರ, ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ನೆನಪಿನ ದ್ವಾರ, ಶ್ರೀಚೌಡೇಶ್ವರಿ ಯುವಕ ಸಂಘದ ನೆನಪಿನ ದ್ವಾರ, ದಿ. ವೆಂಕಟರಮಣಚಾರ್ಯ ನೆನಪಿನ ದ್ವಾರ, ಪುಲಿಗೇರಿ ಬಸವೇಶ್ವರ ಸ್ವಾಮಿ ನೆನಪಿನ ದ್ವಾರ, ದಿ. ಗುರಪ್ಪ ಮಾಸ್ಟರ್ ನೆನಪಿನ ದ್ವಾರ, ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಪುಣ್ಯಕ್ಷೇತ್ರ ದ್ವಾರ, ಶ್ರೀ ಬಸವೇಶ್ವರ ಸ್ವಾಮಿ ನೆನಪಿನ ದ್ವಾರ, ಕೂಗೆಕೋಡಿ ಕನ್ನಂಬಾಡಿಯಮ್ಮ ನೆನಪಿನ ದ್ವಾರಗಳನ್ನು ನಿರ್ಮಿಸಲಾಗಿದೆ.
ಸಮ್ಮೇಳನಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮುಖ್ಯ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಹೆಸರಿನಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ. ಸಮ್ಮೇಳನ ನಡೆಯುವ ಸ್ಥಳದಲ್ಲಿ ೪೦ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.
ಸಮ್ಮೇಳನಕ್ಕೆ ಮೂರೂವರೆ ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಅಷ್ಟೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. -ಭಾಸ್ಕರ್ ಮುಳ್ಳೂರು