ವೀರಾಜಪೇಟೆ, ಫೆ. ೧೦ : ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿ ವಾಹನ ಮತ್ತು ನಗದು ವಶಕ್ಕೆ ಪಡೆದಿರುವ ಘಟನೆ ವೀರಾಜಪೇಟೆ ನಗರ ಹೊರವಲಯದಲ್ಲಿ ನಡೆದಿದೆ.

ವೀರಾಜಪೇಟೆ ನಗರ ಠಾಣೆಯಲ್ಲಿ ದಾಖಲಾದ ಗಾಂಜಾ ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಾಲೂಕು ಕಾಕೋಟುಪರಂಬು ಗ್ರಾಮದ ನಿವಾಸಿ ವಿ.ಆರ್. ಕಿರಣ್ ಕುಮಾರ್ (೩೨) ಸುಂಟಿಕೊಪ್ಪ ಗರಗಂದೂರು ನಿವಾಸಿ, ಪಿರಿಯಾಪಟ್ಟಣ ನಗರ ಬಿ.ಎಂ. ರಸ್ತೆಯ ನಿವಾಸಿ ಹೆಚ್.ಡಿ. ವೇಣು ಕುಮಾರ್ (೨೯) ಮತ್ತು ವೀರಾಜಪೇಟೆ ನಗರ ಅರಸು ನಗರ ನಿವಾಸಿ ಎಂ. ಜೀವನ್ ಕುಮಾರ್ (೩೦) ಹಾಗೂ ಪೆರುಂಬಾಡಿ ಗ್ರಾಮದ ನಿವಾಸಿ ರಶೀದ್ (೩೨) ಬಂಧಿತ ಆರೋಪಿಗಳು.

ವೀರಾಜಪೇಟೆ ಆರ್ಜಿ ಗ್ರಾಮದ ಕಿರುಮಕ್ಕಿ ಜಂಕ್ಷನ್ (ಕಾವೇರಿ ಕಾಲೇಜು) ಮುಂಭಾಗ ತಾ. ೯ ರಂದು ಬೆಳಿಗ್ಗೆ ೯.೩೦ ರ ಸಮಯದಲ್ಲಿ ಪೊಲೀಸ್ ಠಾಣೆಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಯುವಕರ ಮೇಲೆ ಧಾಳಿ ನಡೆಸಿದ್ದಾರೆ. ಆರೋಪಿಗಳಿಂದ ೦೧.ಕೆಜಿ. ೬೬೧ ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸುಮಾರು ೩೦,೦೦೦ ರೂ ಅಂದಾಜು ಮೌಲ್ಯವಾಗಿರುತ್ತದೆ ಎಂದು ಅಂದಾಜು ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ಆಲ್ಟೋ ಕಾರು (ಕೆಎ-೨೦ಎಂ.ಬಿ-೧೧೮೬) ಮತ್ತು ಗೂಡ್ಸ್ ಆಟೋ (ಕೆಎ-೧೨ಎ-೪೯೨೬) ಮತ್ತು ೯೯೦ ರೂ ನಗದು ಹಾಗೂ ೩ ಮೊಬೈಲ್ ದೂರವಾಣಿ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಆರೋಪಿಗಳ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ

(ಮೊದಲ ಪುಟದಿಂದ) ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

ಗ್ರಾಮಾಂತರ ಪ್ರದೇಶವಾದ ಬಿಟ್ಟಂಗಾಲ ಗ್ರಾಮ ಬಳಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕ ರಶೀದ್ ನ ಮೇಲೆ ಧಾಳಿ ನಡೆಸಿ ಸುಮಾರು ೧೦,೦೦೦ ರೂ ಮೌಲ್ಯದ ೫೩೫ ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಬಜಾಜ್ ಸ್ಕೂಟರ್ ಮತ್ತು ೧. ಮೊಬೈಲ್ ದೂರವಾಣಿ ವಶಕ್ಕೆ ಪಡೆದಿದ್ದಾರೆ. ಬಂಧಿತನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಮತ್ತು ವೀರಾಜಪೇಟೆ ಉಪ ವಿಭಾಗ ಪೊಲೀಸು ಅಧೀಕ್ಷಕರಾದ ನಿರಂಜನ್ ರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನೀರಿಕ್ಷಕರಾದ ಬಿ.ಎಸ್ ಶಿವರುಧ್ರ ಗ್ರಾಮಾಂತರ ಠಾಣೆ ಮತ್ತು ನಗರ ಠಾಣೆಯ ಪ್ರಭಾರ ಠಾಣಾಧಿಕಾರಿ ಡಿ.ಆರ್. ರವಿಕುಮಾರ್ ಹಾಗೂ ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಠಾಣೆಗಳ ಸಿಬ್ಬಂದಿಗಳಾದ ಸತೀಶ್, ಜೋಸ್ ನಿಶಾಂತ್, ರಾಮಪ್ಪ, ಧರ್ಮ, ಗಿರೀಶ್, ಪ್ರವೀಣ, ಸಾಗರ್, ಮಲ್ಲಿಕಾರ್ಜುನ ಮಡಿಕೇರಿ ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್, ಪ್ರವೀಣ್ ಅವರುಗಳು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ